12
Su From So: ‘ಸು ಫ್ರಮ್ ಸೋ’ (Su From So) ರಿಲೀಸ್ ಆಗಿ 32 ದಿನಗಳು ಕಳೆದಿವೆ. ಆದಾಗ್ಯೂ ಸಿನಿಮಾದ ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಚಿತ್ರ ಹಲವು ದಾಖಲೆಗಳನ್ನು ಬರೆದು ಮುಂದಕ್ಕೆ ಸಾಗುತ್ತಿದೆ. ಈಗ ಸಿನಿಮಾದ ಒಟಿಟಿ ದಿನಾಂಕ ರಿವೀಲ್ ಆಗಿದೆ.
ಮೂಲಗಳ ಪ್ರಕಾರ ಸೋ ಫ್ರಮ್ ಸೋ ಸಿನಿಮಾ ಸೆಪ್ಟೆಂಬರ್ 2ನೇ ವಾರದಲ್ಲಿ ಜಿಯೋ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮ್ ಆಗಲಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮೂಲಗಳಿಂದ ತಿಳಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಶೇಷ ಅಂದ್ರೆ ಸಿನಿಮಾ ಒಟಿಟಿಗೆ ಬಂದ ಬಳಿಕವೂ ಇದನ್ನು ಕೆಲವರು ಥಿಯೇಟರ್ನಲ್ಲಿ ನೋಡುವುದನ್ನು ಮುಂದುವರಿಸಬಹುದು ಎಂದು ಊಹಿಸಲಾಗಿದೆ.
ಈ ಚಿತ್ರದ ಒಟ್ಟಾರೆ ಕಲೆಕ್ಷನ್ 115.26 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಭಾರತದ ನೆಟ್ ಕಲೆಕ್ಷನ್ 86 ಕೋಟಿ ರೂಪಾಯಿ ಇದೆ. ಭಾರತದ ಗ್ರಾಸ್ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ. ವಿದೇಶದಿಂದ ಸಿನಿಮಾಗೆ 14 ಕೋಟಿ ರೂಪಾಯಿ ಹರಿದು ಬಂದಿದೆ.
