Bill Gates: ಹೊಸದಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ, ಕಂಪೆನಿಯು ಇಂಟರ್ವ್ಯೂಗೆ ಕರೆದಾಗ ಕಂಪನಿ ಕೇಳುವ ಒಂದೇ ಒಂದು ಸಾಮಾನ್ಯ ಪ್ರಶ್ನೆ, ನಿಮಗೆ ಸಂಬಳ ಎಷ್ಟು ಬೇಕು? ಎಂಬುದು. ಇದು ಎಲ್ಲ ಕಂಪನಿಗಳಲ್ಲೂ ಸಾಮಾನ್ಯ. ಆದರೆ ಅನೇಕ ಹೊಸಬರಿಗೆ ಇಷ್ಟು ಸಂಬಳವನ್ನು ಡಿಮ್ಯಾಂಡ್ ಮಾಡಬೇಕು? ನಾವು ಹೆಚ್ಚಾಗಿ ಕೇಳಿದರೆ ಅವರು ಏನೆಂದುಕೊಳ್ಳುತ್ತಾರೋ? ನಮ್ಮನ್ನು ರಿಜೆಕ್ಟ್ ಮಾಡಬಹುದು ಎಂಬ ಭಯವಿರುತ್ತದೆ. ಆದರೆ ಇದೀಗ ಇಂಥವರಿಗೆ ಬಿಲ್ ಗೇಟ್ಸ್ ಹೊಸ ಸಲಹೆಯನ್ನು ನೀಡಿದ್ದಾರೆ.
ಹೌದು, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬಿಲ್ ಗೇಟ್ಸ್, ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಸಂಬಳ ಡಿಮ್ಯಾಂಡ್ ಮಾಡುವ ವಿಷಯದ ಕುರಿತು ಸಲಹೆ ನೀಡಿದ್ದು ನೀವು ಹೊಸ ಅಥವಾ ಬೇರೆ ಕೆಲಸ ಹುಡುಕುತ್ತಿದ್ದರೆ ಆಗ ಸಂದರ್ಶನದ ವೇಳೆ ಸಂಬಳ ಎಷ್ಟು ಅಂತ ಕೇಳಿದರೆ ನೀವು ಎಂದೂ ಸಂಖ್ಯೆಯಲ್ಲಿ ಉತ್ತರ ಹೇಳಬೇಡಿ. ನೀವು ಯಾವುದೇ ಸಂಖ್ಯೆ ಅಥವಾ ಇಷ್ಟು ಪರ್ಸೆಂಟೇಜ್ ಹೈಕ್ ಬೇಕು ಎನ್ನುವ ಬದಲು ವಿವರವಾಗಿ ಉತ್ತರ ನೀಡಲು ಪ್ರಯತ್ನಿಸಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಅಲ್ಲದೆ ನಿಮ್ಮ ಸಂಬಳದ ಉತ್ತರ, ನೀವು ಕಂಪನಿ ಜೊತೆ ದೀರ್ಘ ಸಂಬಂಧ ಬಯಸ್ತೀರಿ ಎಂಬುದನ್ನು ಸೂಚಿಸಬೇಕು, ನಿಮಗೆ ಕಂಪನಿ ಮೇಲೆ ಹೆಚ್ಚಿನ ಆಸಕ್ತಿ ಇದೆ ಎನ್ನುವ ರೀತಿಯ ಉತ್ತರವನ್ನು ನೀವು ನೀಡಬೇಕು. ಉನ್ನತ ಹುದ್ದೆಯಲ್ಲಿ ಕೆಲ್ಸ ಮಾಡುವ ಅನೇಕರು ಕಂಪನಿಯಿಂದ ಬರೀ ಸಂಬಳ ತೆಗೆದುಕೊಳ್ಳೋದಿಲ್ಲ. ಕಂಪನಿ ಷೇರುಗಳಲ್ಲಿ ಪಾಲು ಪಡೆದಿರುತ್ತಾರೆ. ಇಂಟರ್ವ್ಯೂ ಸಮಯದಲ್ಲಿ ಕಂಪನಿ ಮುಖ್ಯಸ್ಥರು ಸಂಬಳ ಎಷ್ಟು ಬೇಕು ಅಂತ ನಿಮ್ಮನ್ನು ಪ್ರಶ್ನೆ ಮಾಡಿದಾಗ, ಪ್ಯಾಕೇಜ್ ಉತ್ತಮವಾಗಿರುತ್ತೆ ಅಂತ ನಾನು ಭಾವಿಸ್ತೇನೆ, ಕಂಪನಿಯ ಭವಿಷ್ಯ ತುಂಬಾ ಚೆನ್ನಾಗಿದೆ ಅಂತ ನನಗನ್ನಿಸುತ್ತೆ, ಹಾಗಾಗಿ ಕ್ಯಾಶ್ ಸ್ಯಾಲರಿಗಿಂತ ಸ್ಟಾಕ್ ಆಯ್ಕೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಆದ್ಯತೆ ನೀಡುತ್ತೇನೆ. ಅನೇಕ ಕಂಪನಿಗಳು ಉತ್ತಮ ಆಫರ್ ನೀಡಿವೆ, ಆದ್ರೆ ನೀವು ನನ್ನ ಜೊತೆ ನ್ಯಾಯಯುತವಾಗಿ ವರ್ತಿಸುತ್ತೀರಿ ಮತ್ತು ಸ್ಟಾಕ್ ಆಯ್ಕೆಗಳನ್ನು ನೀಡ್ತೀರಿ ಅಂತ ನಾನು ಭಾವಿಸ್ತೇನೆ ಎಂಬ ಉತ್ತರ ಇರಬೇಕು. ನೀವು ಇಂಥ ಉತ್ತರ ನೀಡಿದಾಗ, ಕಂಪನಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತೆ ಎನ್ನುತ್ತಾರೆ ಬಿಲ್ ಗೇಟ್ಸ್.
