Home » Kadaba: ಕಡಬ: ಫೇಸ್ ಬುಕ್ ನಲ್ಲಿ ಅಹಿತಕರ ಪೋಸ್ಟ್; ದೂರು ದಾಖಲು!

Kadaba: ಕಡಬ: ಫೇಸ್ ಬುಕ್ ನಲ್ಲಿ ಅಹಿತಕರ ಪೋಸ್ಟ್; ದೂರು ದಾಖಲು!

0 comments
Crime

Kadaba: ಫೇಸ್ ಬುಕ್ ನಲ್ಲಿ ಕೋಮು ಸಾಮರಸ್ಯ ಕದಡುವಂತಹ ಪೋಸ್ಟ್ ಹಾಕಿರುವ ಬಗ್ಗೆ ಕಡಬ(kadaba)ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

30.08.2025 ರಂದು ಕಡಬದ ಕೆ. ಅಬ್ದುಲ್ ಹಕೀಂ, ಎಂಬವರು, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯನ್ನು ಪರಿಶೀಲನೆ ಮಾಡಿದಾಗ Ibrahim Mitthodi ExMuslim ಎಂಬ Facebook ಅಕೌಂಟ್ ನಲ್ಲಿ ಧರ್ಮ-ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡುವಂತೆ ಮಾಡಿ ಸಮಾಜದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಚೋದನಾಕಾರಿ ಪೋಸ್ಟ್ ಒಂದನ್ನು ಗಮನಿಸಿದ್ದಾರೆ. ಅದರಂತೆ ಅವರು ಕಡಬ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like