Jaipur: ಈಗಾಗಲೇ ನಾಲ್ಕಾರು ಮಕ್ಕಳನ್ನು ಕಂಡಿರುವ 55ರ ವಯಸ್ಸಿನ ಮಹಿಳೆಯೊಬ್ಬರು ಇದೀಗ ತನ್ನ 17ನೇ ಮಗುವಿಗೆ ಜನ್ಮ ನೀಡಿದ್ದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ
ಹೌದು, ಜದೋಲ್ ಬ್ಲಾಕ್‌ನಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೇಖಾ ಎನ್ನುವ ಮಹಿಳೆ 17ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಜನಿಸಿದ್ದ ಮಕ್ಕಳಲ್ಲಿ ನಾಲ್ಕು ಗಂಡು, ಒಂದು ಹೆಣ್ಣು ಸೇರಿ ಐದು ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಸದ್ಯ 7 ಗಂಡು, 5 ಹೆಣ್ಣಮಕ್ಕಳು ಸೇರಿ 12 ಮಕ್ಕಳನ್ನು ದಂಪತಿ ಹೊಂದಿದ್ದಾರೆ. ಇವರಲ್ಲಿ ಈಗಾಗಲೇ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಎಲ್ಲರಿಗೂ ಮಕ್ಕಳಿದ್ದಾರೆ ಎಂದು ಕವಾರ ಹೇಳಿಕೊಂಡಿದ್ದಾರೆ.
ಇನ್ನು ಈ ಕುರಿತಾಗಿ ಹೆರಿಗೆ ಮಾಡಿಸಿದ ಡಾಕ್ಟರ್ ಪ್ರತಿಕ್ರಿಯಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಇದು ನಾಲ್ಕನೇ ಮಗು ಎಂದು ಹೇಳಿದ್ದರು. ಆದರೆ ಇದು 17ನೇ ಮಗು ಎನ್ನುವುದು ಬಳಿಕ ತಿಳಿದುಬಂದಿತು. ಮಹಿಳೆಯ ಬಳಿ ಸೊನೊಗ್ರಫಿ ಅಥವಾ ಹೆರಿಗೆ ಪೂರ್ವದ ತಪಾಸಣೆಗಳ ಯಾವ ವರದಿಗಳೂ ಇರಲಿಲ್ಲ. ಹೆರಿಗೆ ವೇಳೆ ಅತಿಯಾದ ರಕ್ತಸ್ರಾವದಿಂದ ಮರಣ ಹೊಂದುವ ಸಾಧ್ಯತೆಯೂ ದಟ್ಟವಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಾಗಲಿಲ್ಲ ಎಂದಿದ್ದಾರೆ. ಸಧ್ಯ 55ನೇ ವಯಸ್ಸಿನಲ್ಲಿ ಹೆರಿಗೆಯಾದ ಸುದ್ದಿ ಕೇಳಿ ಸುತ್ತಮುತ್ತಲಿನ ಊರಿನ ಜನರು, ಸಂಬಂಧಿಗಳು ಕುತೂಹಲದಿಂದ ಆಸ್ಪತ್ರೆಗೆ ಲಗ್ಗೆಯಿಟ್ಟಿದ್ದಾರೆ.
