Sangli : ಮಹಾರಾಷ್ಟ್ರದ ಸಾಂಗ್ಲಿಯ ಮಸೀದಿಯೊಂದರಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶಿಷ್ಟವಾಗಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದ್ದೆ.
ಕಳೆದ ನಾಲ್ಕು ದಶಕಗಳಿಂದ ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ. 15,000 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 100 ಮುಸ್ಲಿಂ ಕುಟುಂಬಗಳಿವೆ. ಅವರು ಗಣೇಶನನ್ನು ಕೂರಿಸುವುದರಿದಿಂದ ಪ್ರಸಾದ ತಯಾರಿಸುವುದು, ಅಲಂಕಾರ ಮಾಡುವುದು ಹೀಗೆ ಕೆಲಸಗಳಲ್ಲಿ ಕೈ ಜೋಡಿಸುತ್ತಾರೆ ಎಂದು ಗಣೇಶ ಮಂಡಲದ ಅಧ್ಯಕ್ಷ ಅಶೋಕ್ ಪಾಟೀಲ್ ಹೇಳಿದ್ದಾರೆ.

1980 ರ ಸಮಯದಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿದ್ದ ವೇಳೆಯಲ್ಲಿ ಭಾರಿ ಮಳೆಯಾದ ಕಾರಣ ಮಸೀದಿಯೊಳಗೆ ಸ್ಥಳಾಂತರ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಗಣೇಶನನ್ನು ಮಸೀದಿಯಲ್ಲಿಯೇ ಕೂರಿಸಲಾಗುತ್ತದೆ.
ಒಮ್ಮೆ ಗಣೇಶ ಹಬ್ಬ ಹಾಗೂ ಬಕ್ರೀದ್ ಒಂದೇ ಬಾರಿ ಬಂದಿತ್ತು. ಆಗ ಗಣೇಶನನ್ನು ಮಸೀದಿಯಲ್ಲಿ ಕೂರಿಸಿ. ನಮಾಜ್ ಮಾತ್ರ ಮಾಡಲಾಗಿತ್ತು. ಊರಿನ ಎಲ್ಲಾ ಮುಸ್ಲಿಮರು ಮಾಂಸಾಹಾರವನ್ನು ತ್ಯಜಿಸಿದ್ದರು. ಇದು ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ರ ಬಾಂಧವ್ಯದ ಸಂಕೇತ ಎಂದು ಗಣೇಶ ಮಂಡಲದ ಅಧ್ಯಕ್ಷರು ಹೇಳಿದ್ದಾರೆ.
