Home » Trump Tariff: ಭಾರತಕ್ಕೆ ರಷ್ಯಾ ಅಲ್ಲ, ಅಮೆರಿಕ ಬೇಕು: ಚೀನಾ, ರಷ್ಯಾ ಜೊತೆ ಮೋದಿ ಬೆರೆಯೋದು ನಾಚಿಕೆಗೇಡಿನ ಸಂಗತಿ – ಅಮೆರಿಕ

Trump Tariff: ಭಾರತಕ್ಕೆ ರಷ್ಯಾ ಅಲ್ಲ, ಅಮೆರಿಕ ಬೇಕು: ಚೀನಾ, ರಷ್ಯಾ ಜೊತೆ ಮೋದಿ ಬೆರೆಯೋದು ನಾಚಿಕೆಗೇಡಿನ ಸಂಗತಿ – ಅಮೆರಿಕ

0 comments

Trump Tariff: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ ಪೀಟರ್ ನವರೊ ಅವರು ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ಟೀಕಿಸಿದ್ದಾರೆ. “(ಪ್ರಧಾನಿ) ನರೇಂದ್ರ ಮೋದಿ, ಕ್ಸಿ ಜಿನ್‌ಪಿಂಗ್‌ ಮತ್ತು ಬ್ಲಾಡಿಮಿರ್ ಪುಟಿನ್ ಅವರೊಂದಿಗೆ ಬೆರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಅವರು ಹೇಳಿದರು. ಭಾರತಕ್ಕೆ ರಷ್ಯಾ ಅಲ್ಲ, ಅಮೆರಿಕ ಬೇಕು ಎಂಬುದನ್ನು ಪ್ರಧಾನಿ ಮೋದಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಆಶಿಸಿದ್ದಾರೆ.

ಭಾರತದೊಂದಿಗಿನ ವ್ಯಾಪಾರ ಏಕಪಕ್ಷೀಯ ವಿಪತ್ತು – ಟ್ರಂಪ್

“ಭಾರತದೊಂದಿಗೆ ಅಮೆರಿಕ ಬಹಳ ಕಡಿಮೆ ವ್ಯವಹಾರ ನಡೆಸುತ್ತದೆ, ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ನಡೆಸುತ್ತಾರೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಭಾರತವು ಅಮೆರಿಕದ ಸರಕುಗಳ ಮೇಲೆ ಯಾವುದೇ ದೇಶಕ್ಕಿಂತ “ಅತಿ ಹೆಚ್ಚು” ಸುಂಕಗಳನ್ನು ವಿಧಿಸುತ್ತದೆ ಎಂದು ಅವರು, “ಇದು ಸಂಪೂರ್ಣವಾಗಿ ಏಕಪಕ್ಷೀಯ ವಿಪತ್ತು!” ಎಂದರು. ಪ್ರಧಾನಿ ನರೇಂದ್ರ ಮೋದಿ ಚೀನಾದ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಬ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ ಈ ಹೇಳಿಕೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಚೀನಾದಲ್ಲಿ ನಡೆಯುತ್ತಿರುವ ಶಾಂಫೈ ಸಹಕಾರ ಸಂಘಟನೆಯ (SCO) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿಕೆ ನೀಡಿದ್ದು, “ಸುಂಕವನ್ನು ಕಡಿಮೆ ಮಾಡಲು ಭಾರತವು ಅಮೆರಿಕಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ” ಎಂದರು. “ಇದು ತಡವಾದ ಇರಿಸಲಾದ ಹೆಜ್ಜೆ. ಭಾರತ ಇದನ್ನು ಹಲವು ವರ್ಷಗಳ ಹಿಂದೆಯೇ ಮಾಡಬೇಕಿತ್ತು” ಎಂದು ಟ್ರಂಪ್ ಹೇಳಿದರು.

Uttar pradesh: ಮದುವೆ ಆಗಿ ಒಂದೇ ವರ್ಷದಲ್ಲಿ ಕಾಣೆಯಾದ ಪತಿ 7 ವರ್ಷದ ನಂತರ ರೀಲ್ಸ್ ನಲ್ಲಿ ಪತ್ತೆ!

You may also like