Home » Yadagiri: ಸೋದರರಿಂದ ಚಿಕ್ಕಮ್ಮನ ಮೇಲೆಯೇ ನಿರಂತರ ಅತ್ಯಾಚಾರ, ಮಾನಸಿಕ ಹಿಂಸೆ: ದೂರು ದಾಖಲು

Yadagiri: ಸೋದರರಿಂದ ಚಿಕ್ಕಮ್ಮನ ಮೇಲೆಯೇ ನಿರಂತರ ಅತ್ಯಾಚಾರ, ಮಾನಸಿಕ ಹಿಂಸೆ: ದೂರು ದಾಖಲು

0 comments
Rape Case Bhopal

Yadagiri: ಯಾದಗಿರಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಹೇಯ ಕೃತ್ಯ ನಡೆದಿರುವ ಕುರಿತು ಮಹಿಳೆಯೊಬ್ಬರು ದೂರು ದಾಖಲು ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಚಪೇಟ್ಲಾ ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಮೇಲೆ ಕಳೆದ ಏಳು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಇಬ್ಬರು ಸೋದರರ ಮೇಲೆ ಗಂಭೀರ ಆರೋಪ ಮಾಡಿ ದೂರನ್ನು ನೀಡಿದ್ದಾರೆ.

ಮಹಿಳೆಗೆ ಈ ಸೋದರರು ಸಂಬಂಧದಲ್ಲಿ ಚಿಕ್ಕಮ್ಮ ಆಗಬೇಕು ಎನ್ನುವ ಮಾಹಿತಿಯಿದೆ.

ಸೋದರರಿಬ್ಬರು ಕಳೆದ ಏಳು ವರ್ಷಗಳಿಂದ ಜೀವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾರೆ. ಇದರ ಜೊತೆ ನನ್ನ ಮಗಳು 14 ವರ್ಷದಾಗಿನಿಂದಲೂ ಅಶ್ಲೀಲವಾಗಿ ವಾಟ್ಸಪ್‌ ಮೆಸೇಜ್‌ ಕಳುಹಿಸುತ್ತಿದ್ದಾರೆ. ಬಟ್ಟೆಯನ್ನು ಬಿಚ್ಚಿ ಬೆತ್ತಲೆ ದೇಹವನ್ನು ತೋರಿಸು ಎಂದು ಹಿಂಸೆ ನೀಡುತ್ತಿದ್ದಾರೆ. ರಮೇಶ್‌ ಹಾಗೂ ಲಕ್ಷ್ಮಣ್‌ (ಆರೋಪಿಗಳು) ಇವರಿಂದ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳೆ ಆರೋಪ ಮಾಡಿರುವ ಕುರಿತು ವರದಿಯಾಗಿದೆ.

 

You may also like