Home » Bike Mileage: ನಿಮ್ಮ ಬೈಕ್ ನಲ್ಲಿ ಪೆಟ್ರೋಲ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಯೂಸ್ ಮಾಡಿ, ಮೈಲೇಜ್ ಜಾಸ್ತಿ ಪಡೆಯಿರಿ

Bike Mileage: ನಿಮ್ಮ ಬೈಕ್ ನಲ್ಲಿ ಪೆಟ್ರೋಲ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಯೂಸ್ ಮಾಡಿ, ಮೈಲೇಜ್ ಜಾಸ್ತಿ ಪಡೆಯಿರಿ

0 comments

Bike Mileage: ಎಷ್ಟೇ ಲಕ್ಷ ಕೊಟ್ಟು ಬೈಕ್ ಕೊಂಡರೂ ದೊಡ್ಡ ತಲೆನೋವು ಆಗೋದು ಅಂದ್ರೆ ಅದರ ಮೈಲೇಜ್. ಕಡಿಮೆ ಮೈಲೇಜ್(Bike Mileage)ಸಮಸ್ಯೆಯಿಂದ ಪೆಟ್ರೋಲ್ ಹಾಕಿ ಹಾಕಿ ಸುಸ್ತು ಹೊಡೆಯಬೇಕಾಗುತ್ತೆ. ಆದರೀಗ ನೀವು ಈ ಟ್ರಿಕ್ಸ್ ಯೂಸ್ ಮಾಡಿದರೆ ಪೆಟ್ರೋಲ್ ಅನ್ನು ಸುಲಭದಲ್ಲಿ ಉಳಿಸಬಹುದು.

ಪೆಟ್ರೋಲ್ ಉಳಿಸುವ ಟಿಪ್ಸ್:
ಪೆಟ್ರೋಲ್ ಉಳಿಸಲು ಮಾಡಬಾರದ ಕೆಲಸಗಳಾವುವು.?
ನೀವು ಸವಾರಿ ಮಾಡುವಾಗ ಕ್ಲಚ್ ಲಿವರ್ ಅನ್ನು ಗಟ್ಟಿಯಾಗಿ ಒತ್ತಬೇಡಿ.
ಕಡಿಮೆ ಗೇರ್‌ನಲ್ಲಿ ದೀರ್ಘಕಾಲದವರೆಗೆ ಎಂಜಿನ್ ಅನ್ನು ಚಲಾಯಿಸಬೇಡಿ.
ಬೈಕ್ ಅನ್ನು ಸೂರ್ಯನ ಬೆಳಕಿನಲ್ಲಿ ನಿಲ್ಲಿಸಬೇಡಿ.. ಇದರಿಂದ ಪೆಟ್ರೋಲ್ ಟ್ಯಾಂಕ್ ಬಿಸಿ ಇಂಧನ ಆವಿಯಾಗುತ್ತದೆ.
ಚಲಿಸುವಾಗ ಬ್ರೇಕ್ ಪೆಡಲ್ ಒತ್ತಿ ಹಿಡಿದುಕೊಳ್ಳಬೇಡಿ.
ಟ್ರಾಫಿಕ್ ನಲ್ಲಿ ನಿಂತಾಗ ಎಂಜಿನ್ rpm ಅನ್ನು ಹೆಚ್ಚಿಸಬೇಡಿ. ಜೊತೆಗೆ ಸಿಗ್ನಲ್ ಬಿಡಲು 30 ಸೆಕೆಂಡುಗಳಿಗಿಂತ ಹೆಚ್ಚು ಸಮಯವಿದ್ದರೆ ಬೈಕ್ ನ ಇಂಜಿನ್ ಆಫ್ ಮಾಡಿ.

You may also like