Home » IPL ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ

IPL ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ

0 comments

IPL: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡುವ ಮೂಲಕ ದೇಶದ ಜನರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಹಾಗೂ ಕೆಲವು ವಸ್ತುಗಳ ಮುಖಾಂತರ ಜನರಿಗೆ ನಿರಾಸೆಯನ್ನು ಕೂಡ ಉಂಟು ಮಾಡಿದೆ. ಅಷ್ಟು ಮಾತ್ರವಲ್ಲದೆ ಐಪಿಎಲ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

ಹೌದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಪದ್ದತಿಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಹಾಲಿ ಇರುವ 4 ಸ್ತರದ ತೆರಿಗೆಯನ್ನು ಎರಡು ಸ್ತರಕ್ಕೆ ಇಳಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾದರೂ, ಐಪಿಎಲ್‌ ಫ್ಯಾನ್ಸ್‌ಗೆ ದೊಡ್ಡ ಅಘಾತವನ್ನು ನೀಡಿದೆ.

ಅದೇನೆಂದರೆ ಇದೇ ಸೆಪ್ಟೆಂಬರ್ 22ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಈ ಸಾಲಿಗೆ ಇದೀಗ ಐಪಿಎಲ್‌ ಕೂಡ ಸೇರಲಿದ್ದು, ಟಿಕೆಟ್‌ ದರಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಐಪಿಎಲ್ ಕ್ರಿಕೆಟ್‌ ಪಂದ್ಯವನ್ನು ಮೈದಾನದಲ್ಲಿ ವೀಕ್ಷಣೆ ಮಡುವ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ ಬೀಳಲಿದೆ. ಐಪಿಎಲ್ ಟಿಕೆಟ್‌ಗಳಿಗೆ ಜಿಎಸ್‌ಟಿ ದರವನ್ನ ಶೇ. 28ರಿಂದ ಶೇ.40ಕ್ಕೆ ಏರಿಕೆ ಮಾಡಲಾಗಿದೆ. ಇದು ಇದೇ 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:GST: ಟಿವಿ, ಎಸಿ, ವಾಷಿಂಗ್ ಮಷೀನ್ ಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ರೆ ಈ ದಿನಾಂಕದ ಬಳಿಕ ಖರೀದಿಸಿ, ಹಣ ಉಳಿಸಿ

ಹೀಗಾಗಿ ಮುಂದಿನ ಸೀಸನ್​ ಐಪಿಎಲ್ ವೇಳೆ ಟಿಕೆಟ್​ ದರಗಳು ಮತ್ತಷ್ಟು ದುಬಾರಿಯಾಗಲಿದೆ. ಅಂದರೆ 1000 ರೂ. ಟಿಕೆಟ್ ಖರೀದಿಸಿದರೆ, ಅದರ ಮೇಲೆ ಶೇ.40 ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ. ಇದರಿಂದ 1000 ರೂ. ಟಿಕೆಟ್ ದರವು 1400 ರೂ. ಆಗಲಿದೆ ಎಂದು ವರದಿಯಾಗಿದೆ. ಇದೇ ರೀತಿ ಅತೀ ಕಡಿಮೆ ಟಿಕೆಟ್ ದರವಾಗಿರುವ 500 ರೂ.ಗಳ ಟಿಕೆಟ್‌ನ ಹೊಸ ಬೆಲೆಯು 700 ರೂ. ಆಗಲಿದೆ. ಇದಕ್ಕೂ ಮುನ್ನ 500 ರೂ. ಟಿಕೆಟ್ ದರವು ಜಿಎಸ್​ಟಿ ಸೇರಿ 640 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು 2000 ರೂ.ಗಳಟಿಕೆಟ್​ಗೆ 2560 ರೂ.ಗಳ ಬದಲಿಗೆ 2800 ರೂ.ಗಳನ್ನುಪಾವತಿಸಬೇಕಾಗುತ್ತದೆ.

You may also like