Home » Mysore Dasara: ದಸರಾ ದೀಪಾಲಂಕಾರ – ಈ ಬಾರಿ ಮತ್ತಷ್ಟು ಅದ್ದೂರಿ – 136 ಕಿ.ಮೀ ರಸ್ತೆ, 118 ವೃತ್ತಗಳಲ್ಲಿ ಬೆಳಕಿನ ಚಿತ್ತಾರ

Mysore Dasara: ದಸರಾ ದೀಪಾಲಂಕಾರ – ಈ ಬಾರಿ ಮತ್ತಷ್ಟು ಅದ್ದೂರಿ – 136 ಕಿ.ಮೀ ರಸ್ತೆ, 118 ವೃತ್ತಗಳಲ್ಲಿ ಬೆಳಕಿನ ಚಿತ್ತಾರ

0 comments

Mysore Dasara: ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಬೆಳಕಲಿ ಜಗಮಗಿಸಲಿದೆ. 136 ಕಿ. ಮೀ ರಸ್ತೆ, 118 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ಅಲ್ಲದೆ, ವಿವಿಧೆಡೆ ವರ್ಣರಂಜಿತ ಲೈಟ್ ಗಳಲ್ಲಿ 60ಕ್ಕೂ ಹೆಚ್ಚು ಪ್ರತಿಕೃತಿಗಳು ಪ್ರವಾಸಿಗರ ಕಣ್ಮನ ಸೆಳೆಯಲಿವೆ.

ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಪ್ರವಾ ಸಿಗರನ್ನು ಆಕರ್ಷಿಸಲು ಅಪರೂಪದ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ವರ್ಷವೂ ನವರಾತ್ರಿ ವೇಳೆ ದೀಪಾಲಂ ಕಾರದಿಂದ ಮಿಂದೇಳುವ ಮೈಸೂರಿನ ಅಂದ ಕಣ್ಣುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿಯೂ ದೀಪಾಲಂಕಾರ ಅದ್ದೂರಿಯಾಗಿರಲಿದೆ.

ಈ ಬಾರಿಯ ನಾಡಹಬ್ಬ 66 ಮೈಸೂರು ದಸರಾ ದೀಪಾ ಲಂಕಾರ ಅದ್ಧೂರಿಯಾಗಿಯೂ, ವೈಭವ ಯುತವಾಗಿಯೂ ಇರಲಿದೆ. 136 ಕಿ.ಮೀ. ರಸ್ತೆ 118 ವೃತ್ತಕ್ಕೆ ದೀಪಾಲಂಕಾರದ ಜೊತೆಗೆ ವರ್ಣರಂಜಿತ ಬಲ್‌ಗಳಲ್ಲಿ 60 ಆಕೃತಿ ಗಳನ್ನು ರೂಪಿಸಿ ವಿವಿ ಧೆಡೆ ಅಳವಡಿಸಲಾಗು ತ್ತಿದೆ. ಈಗಾಗಲೇ ದೀಪಾ ಲಂಕಾರಕ್ಕೆ ಸಿದ್ಧತೆ ಆರಂ ಭಿಸಲಾಗಿದ್ದು, ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ದೀಪಾಲಂಕಾರ ಕಾಮ ಗಾರಿ ಪೂರ್ಣಗೊಳ್ಳಲಿದೆ ಎಂದು ಸೆಸ್ಕ್, ವ್ಯವಸ್ಥಾಪಕ ನಿರ್ದೇಶಕ, ಕೆ.ಎಂ.ಮುನಿಗೋಪಾಲರಾಜ್ ತಿಳಿಸಿದ್ದಾರೆ.

ದಸರಾ ದೀಪಾಲಂಕಾರವನ್ನು ಅಚ್ಚು ಕಟ್ಟಾಗಿ ನೆರವೇರಿಸಲು ಈಗಾಗಲೇ ಜಿಲ್ಲಾ ಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿಗಳೂ ಆದ ಜಿ.ಲಕ್ಷ್ಮೀಕಾಂತರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜ್ ಪೂರ್ವಭಾವಿ ಸಭೆ ನಡೆಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿ ದ್ದರು. ಅಲ್ಲದೆ, ದೀಪಾಲಂಕಾರಕ್ಕಾಗಿ ಟೆಂಡರ್ ಪಡೆದವರಿಂದ ದೀಪಾಲಂ ಕಾರಕ್ಕಾಗಿ ಬಳಸುವ ಬಲ್‌ಗಳು ಮತ್ತು ವಿನ್ಯಾಸ ಕುರಿತಂತೆ ಪ್ರಾತ್ಯಕ್ಷಿಕೆ ವೀಕ್ಷಿಸಿ.

ದೀಪಾಲಂಕಾರದ ಸೊಬಗು ಹೆಚ್ಚಿಸುವ ಶೈಲಿಯ ವಿನ್ಯಾಸ ಮತ್ತು ಅಂತಹ ಬಲ್ಟ್ ಗಳನ್ನೇ ಬಳಸಲು ಆಯ್ಕೆ ಮಾಡಲಾಗಿತ್ತು. ಇದೀಗ ದಸರಾ ಉದ್ಘಾಟನೆಗೆ ಕೇವಲ (ಸೆ.22) 18 ದಿನ ಮಾತ್ರ ಉಳಿದಿರುವುದರಿಂದ ದೀಪಾ ಲಂಕಾರ ಸಿದ್ಧತೆ ಆರಂಭವಾಗಿದೆ.

ಅತೀ ಹೆಚ್ಚು ಆಕರ್ಷಣೆ: ದಸರಾ ದೀಪಾಲಂಕಾರ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಣೀಯವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಆ ಕಾರಣದಿಂದ ಮೈಸೂರಿನ ಪ್ರಮುಖ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಈ ಬಾರಿ ಒಟ್ಟು 136 ಕಿ.ಮೀ. ದೀಪಾಲಂ ಕಾರ ಮಾಡಲಾಗುತ್ತಿದೆ. ಮೈಸೂರಿನ ಹೃದಯ ಭಾಗದ ಪ್ರಮುಖ ವೃತ್ತ ಸೇರಿ ದಂತೆ ವಿವಿಧ ಬಡಾವಣೆಗಳಲ್ಲಿರುವ 118 ವೃತ್ತಗಳಿಗೂ ದೀಪಾಲಂಕಾರ ಮಾಡಲಾಗುತ್ತಿದೆ.

ಅಲ್ಲದೆ, ದೊಡ್ಡಕೆರೆ ಮೈದಾನ, ಗನ್‌ಹೌಸ್ ವೃತ್ತ, ರಾಮಸ್ವಾಮಿ ವೃತ್ತ, ಕೌಟಿಲ್ಯ ವೃತ್ತ, ಎಲ್‌ಐಸಿ ಕಚೇರಿ ವೃತ್ತ, ಮುಡಾ ವೃತ್ತ, ದೇವರಾಜ ಅರಸು ರಸ್ತೆ-ಜೆಎಲ್‌ಬಿ ರಸ್ತೆ ಜಂಕ್ಷನ್, ರೈಲ್ವೆ ನಿಲ್ದಾಣದ ವೃತ್ತ, ಚಲುವಾಂಬ ಆಸ್ಪತ್ರೆ ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ಹೈ ವೇ ವೃತ್ತ, ಫೌಂಟೇನ್ ವೃತ್ತ ಸೇರಿ ದಂತೆ 118 ವೃತ್ತಗಳಲ್ಲಿ ವರ್ಣ ರಂಜಿತ ಲೈಟ್‌ಗಳಿಂದ ವಿವಿಧ ಆಕೃತಿಗಳು ಪ್ರವಾಸಿಗರ ಮನಸೂರೆಗೊಳ್ಳಲಿವೆ.

ಹೊರ ರಾಜ್ಯಗಳಿಂದ ವಿದ್ಯುತ್ ಬಲ್ಫ್ ಆಮದು: ದೀಪಾಲಂಕರಾದ ಸೊಬಗು ಹೆಚ್ಚಿಸಲು ಈ ಬಾರಿ ಹೊರ ರಾಜ್ಯ ಗಳಿಂದ ಅತ್ಯಾಕರ್ಷಕ ವಿದ್ಯುತ್ ಬಲ್ಟ್ ತರಿಸಲಾಗುತ್ತಿದೆ. ಈಗಾಗಲೇ ಪ್ರಾತ್ಯಕ್ಷಿಕೆ (ಡೆಮೋ) ವೇಳೆ ಹೊರ ರಾಜ್ಯಗಳಿಂದ ತಂದಿರುವ ಅಲಂಕಾರಿಕ ಬಳ್ಳಿಗಳು ದೀಪಾಲಂಕಾರದ ಮೆರಗು ಹೆಚ್ಚಿಸುವುದು ಖಚಿತವಾಗಿರುವುದರಿಂದ ಆ ಬಲ್ಟ್ ಗಳನ್ನೇ ದೀಪಾಲಂಕಾರದಲ್ಲಿ ಬಳಸು ವಂತೆ ಗುತ್ತಿಗೆದಾರರಿಗೆ ಸೂಚನೆ ನೀಡ ಲಾಗಿದೆ. ಇದರಿಂದಾಗಿ ಕೋಲ್ಕತ್ತಾ ಹಾಗೂ ಇನ್ನಿತರ ರಾಜ್ಯಗಳಿಂದ ತಂದಂತಹ ಅತ್ಯಾಕರ್ಷಕ ಲಕ್ಷಕ್ಕೂ ಅಧಿಕ ಬಲ್ಬಗಳು ನವರಾತ್ರಿ ವೇಳೆ ಮೈಸೂರನ್ನು ಬೆಳಗಲಿವೆ.

ಹೊರ ರಾಜ್ಯದಿಂದ ತರುವ ಬಲ್ಟ್ ಗಳು ಚಲಿಸುವಂತೆ(ಮೂವ್‌ಮೆಂಟ್) ಭಾಸವಾಗುವುದರಿಂದ ಆಕೃತಿಗಳಿಗೆ ಜೀವಕಳೆ ಬಂದಂತೆ ಕಾಣುತ್ತವೆ. ಈ ಬಲ್ಬಗಳು ತ್ರಿವರ್ಣ ಧ್ವಜ ಹಾರಾಡುವಂತೆ, ವಾಹನಗಳ ಆಕೃತಿಯಲ್ಲಿ ಚಕ್ರಗಳು ಚಲಿ ಸುವಂತೆ, ವಿವಿಧ ಗೊಂಬೆ ಆಕೃತಿಗಳು ಚಲನಶೀಲತೆಯಿಂದ ಕಾಣುವಂತೆ ಕಂಡು ಬರುವುದರಿಂದ ಆ ಬಲ್ಬಗಳು ನೋಡುಗರನ್ನು ಆಕರ್ಷಿಸಲಿವೆ.”

2.50 ಲಕ್ಷ ಯೂನಿಟ್ ವಿದ್ಯುತ್ ಬಳಕೆ: ಈ ಬಾರಿ ದೀಪಾಲಂಕಾರಕ್ಕೆ ಲಕ್ಷಾಂತರ ವಿದ್ಯುತ್ ಬಲ್ಟ್ ಬೆಳಗುವುದರಿಂದ 2.50 ಲಕ್ಷ ಯೂನಿಟ್ (3 ಮೆಗಾವ್ಯಾಟ್) ವಿದ್ಯುತ್‌ ಖರ್ಚಾಗಲಿದೆ. ಅಲ್ಲದೆ, ದಸರಾ ದೀಪಾಲಂಕಾರಕ್ಕಾಗಿ ಈ ಬಾರಿ 6 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ ವಿವಿಧ ಕಾಮಗಾರಿಯನ್ನು ವಿಂಗಡಿಸಿ, ಟೆಂಡರ್ ಕರೆದು ಗುತ್ತಿಗೆದಾರರಿಗೆ ದೀಪಾಲಂಕಾ ರದ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ:Puttur: ಪುತ್ತೂರು: “ಪಿಎಂಶ್ರೀ ವೀರಮಂಗಲ ಶಾಲೆ” ತ್ರಿವಳಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಾಣ

ದೀಪಾಲಂಕಾರದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡ ಲಾಗಿದೆ ದೀಪಾಲಂಕಾರ ನೋಡಲು ಪ್ರವಾಸಿಗರು ಮುಗಿ ಬೀಳುವುದರಿಂದ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲು ಹಾಗೂ ವಿದ್ಯುತ್ ಅವಘಡ ತಪ್ಪಿಸಲು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

You may also like