Home » Puttur: ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲೆಗೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ “ಅತ್ಯುತ್ತಮ ಪಿಎಂಶ್ರೀ ಶಾಲೆ” ಪ್ರಶಸ್ತಿ ಪ್ರದಾನ!

Puttur: ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲೆಗೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ “ಅತ್ಯುತ್ತಮ ಪಿಎಂಶ್ರೀ ಶಾಲೆ” ಪ್ರಶಸ್ತಿ ಪ್ರದಾನ!

0 comments

Puttur: ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಪಿಎಂಶ್ರೀ ಶಾಲೆಯಾಗಿ ದೇಶಕ್ಕೆ ಸಮರ್ಪಣೆಗೊಂಡ ವೀರಮಂಗಲ ಪಿಎಂಶ್ರೀ ಶಾಲೆಗೆ ಗೌರವ ಪ್ರಶಸ್ತಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಪ್ರದಾನ ಮಾಡಿದರು.

ಇದನ್ನೂ ಓದಿ;Afghanistan quake: ಅಫ್ಘಾನಿಸ್ತಾನ ಭೂಕಂಪ: ಸಾವಿನ ಸಂಖ್ಯೆ 2,200ಕ್ಕೆ ಏರಿಕೆ – ಕಂಪಿಸುತ್ತಲೇ ಇದೆ ಭೂಮಿ

ವಿದಾನಪರಿಷತ್ ಸದಸ್ಯರಾದ ಬೋಜೆಗೌಡ,ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರಾದ ಶಶಿಧರ್ ಜಿ ಎಸ್, ಅಭಿವೃದ್ದಿ ವಿಭಾಗದ ಉಪನಿರ್ದೇಶಕರಾದ ಸದಾನಂದ ಪೂಂಜಾ,ಅಕ್ಷರ ದಾಸೋಹ ಜಿಲ್ಲಾ ನಿರ್ದೇಶಕ ಜ್ಞಾನೇಶ್, ಬೆಳ್ತಂಗಡಿ ಶಿಕ್ಷಣಾಧಿಕಾರಿ ತಾರಕೇಸರಿ, ಸೇರಿದಂತೆ ಹಲವಾರು ಗಣ್ಯರು ,ವಿವಿಧ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು ಪ್ರಶಸ್ತಿಯನ್ನು ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವೀಕರಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಚಂದ್ರ, ಹರೀಶ್, ಸುರೇಶ್ ಗಂಡಿ, ರಮೇಶ್ ಗೌಡ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಶಾಲಾ ನಾಯಕ ಶಿವಶನ್ಮಯಿ, ಶಿಕ್ಷಕರಾದ ಹೇಮಾವತಿ, ಶ್ರೀಲತಾ,ಕವಿತಾ ಸೌಮ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು.

You may also like