Tata Tiago EV: ಪ್ರತಿಯೊಂದು ಕುಟುಂಬಕ್ಕೂ ತಮ್ಮದೇ ಆದ ಒಂದು ಸ್ವಂತ ವಾಹನ ಇರಬೇಕು, ಅದರಲ್ಲೂ ಒಂದು ಕಾರು ಇದ್ದರಂತೂ ತುಂಬಾ ಅನುಕೂಲ ಎಂಬುದು ಆಸೆ. ಆದರೆ ಇಂದು ಕಾರುಗಳ ಬೆಲೆ ದುಪ್ಪಟ್ಟಾಗುತ್ತಿರುವ ಕಾರಣ ಅನೇಕರ ಈ ಕನಸು ನನಸಾಗಿಯೇ ಉಳಿಯುತ್ತಿದೆ. ಅದರಲ್ಲೂ ಬಡವರು ಮತ್ತು ಮಧ್ಯಮ ವರ್ಗದವರಿಗೆ ಈ ರೀತಿ ಆಗುವುದು ಹೆಚ್ಚು. ಆದರೆ ಇನ್ನು ಮುಂದೆ ಈ ಯೋಚನೆ ಬೇಡ. ಯಾಕೆಂದರೆ ನಿಮ್ಮ ಬಳಿ ಬರಿ ಎರಡು ಲಕ್ಷ ವಿದ್ದರೆ ಸಾಕು ಆರಾಮಾಗಿ ದುಪ್ಪಟ್ಟು ಬೆಲೆಯ ಈ ಎಲೆಕ್ಟ್ರಿಕ್ ಕಾರನ್ನು ಖರೀದಿಸಬಹುದು.
ಹೌದು, Tata Tiago EV ಒಂದು ಜನಪ್ರಿಯ ಎಲೆಕ್ಟ್ರಿಕ್ ಕಾರು ಮತ್ತು ಸುಲಭ ಫೈನಾನ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ನೀವು ಇದನ್ನು ಕೇವಲ ಎರಡು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್‌ನಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು. ಹಾಗಿದ್ರೆ ಇದರ ಫೈನಾನ್ಸ್ ವಿವರಗಳು ಏನು ಎಂದು ನೋಡೋಣ.
ಕಾರಿನ ನಿಜವಾದ ಬೆಲೆ ಏನು?
ಟಾಟಾ ಈ ಎಲೆಕ್ಟ್ರಿಕ್ ಕಾರನ್ನು ನಾಲ್ಕು ವೇರಿಯಂಟ್‌ಗಳಲ್ಲಿ ನೀಡುತ್ತದೆ, ಅವುಗಳ ಎಕ್ಸ್-ಶೋರೂಮ್ ಬೆಲೆ 7.99 ಲಕ್ಷದಿಂದ 11.14 ಲಕ್ಷ ರೂಪಾಯಿಗಳವರೆಗೆ ಇದೆ. ಇದರ ಹೊಸ ದೆಹಲಿ ಎಕ್ಸ್-ಶೋರೂಮ್ ಬೆಲೆ 7,99,000 ರೂಪಾಯಿಗಳು. ನೀವು ಇದನ್ನು ಖರೀದಿಸಿದರೆ, 7,430 ರೂಪಾಯಿ ರಸ್ತೆ ತೆರಿಗೆ (RTO) ಮತ್ತು 35,395 ರೂಪಾಯಿ ವಿಮೆಗೆ ಸೇರಿಸಲಾಗುತ್ತದೆ. ಈ ಎರಡು ಖರ್ಚುಗಳನ್ನು ಸೇರಿಸಿದರೆ ಕಾರಿನ ಒಟ್ಟು ಬೆಲೆ ಅಂದರೆ ಆನ್ ರೋಡ್ ಬೆಲೆ 8,41,825 ರೂಪಾಯಿ ಆಗುತ್ತದೆ.
ಫೈನಾನ್ಸ್ ವಿವರ:
ಈ ಕಾರನ್ನು ಖರೀದಿಸುವ ಆಲೋಚನೆಯಲ್ಲಿ ನೀವು ಇದ್ದರೆ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿ. ಉಳಿದ 6,41,825 ರೂಪಾಯಿಗಳಿಗೆ ಬ್ಯಾಂಕಿನಿಂದ ಸಾಲ ಪಡೆಯಬೇಕಾಗುತ್ತದೆ. ಬ್ಯಾಂಕಿನಿಂದ 5 ವರ್ಷಗಳವರೆಗೆ ಸಾಲವನ್ನು ತೆಗೆದುಕೊಂಡರೆ ಮತ್ತು ಬಡ್ಡಿ ದರವು 10 ಪರ್ಸೆಂಟ್ ಇರುತ್ತದೆ. ನೀವು ಪ್ರತಿ ತಿಂಗಳು 13,637 ರೂಪಾಯಿಗಳನ್ನು ಕಂತು ರೂಪದಲ್ಲಿ ಪಾವತಿಸಬೇಕು. ಈ ಕಂತು ನಿಮ್ಮ ಐದು ವರ್ಷಗಳವರೆಗೆ ಇರುತ್ತದೆ. ಈ ರೀತಿ ನೀವು ಐದು ವರ್ಷಗಳಲ್ಲಿ ಬ್ಯಾಂಕಿಗೆ 1,76,388 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸುವಿರಿ.
ಕಾರಿನ ಸ್ಪೆಷಾಲಿಟಿ ಏನು?
ಈ ಕಾರಿಗೆ 19.2 kWh ನ ಬ್ಯಾಟರಿಯನ್ನು ನೀಡಲಾಗಿದೆ, ಇದು 60.34 bhp ಪವರ್ ಮತ್ತು 110 Nm ಟಾರ್ಕ್ ಅನ್ನು ನೀಡುತ್ತದೆ. ಕಂಪನಿಯು ಈ ಕಾರಿನಿಂದ 250 km ರೇಂಜ್ ಅನ್ನು ನೀಡುತ್ತದೆ. ಕಾರಿನ ಮುಂಭಾಗದ ಚಕ್ರಗಳಲ್ಲಿ ಡಿಸ್ಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಇಷ್ಟೇ ಅಲ್ಲ, ಸುರಕ್ಷತೆಗಾಗಿ ಕಾರಿನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS),ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್, 2 ಏರ್‌ಬ್ಯಾಗ್‌ಗಳಂತಹ ಅನೇಕ ಫೀಚರ್‌ಗಳನ್ನು ನೀಡಲಾಗಿದೆ.
