Home » Digital arrest : ಕರ್ನಾಟಕದ ಮಾಜಿ ಸಚಿವರಿಗೂ ತಪ್ಪಲಿಲ್ಲ ಡಿಜಿಟಲ್ ಅರೆಸ್ಟ್ – 30 ಲಕ್ಷ ಗೋವಿಂದ !!

Digital arrest : ಕರ್ನಾಟಕದ ಮಾಜಿ ಸಚಿವರಿಗೂ ತಪ್ಪಲಿಲ್ಲ ಡಿಜಿಟಲ್ ಅರೆಸ್ಟ್ – 30 ಲಕ್ಷ ಗೋವಿಂದ !!

0 comments

Digital arrest: ಸೈಬರ್ ವಂಚನೆಗಳಲ್ಲಿ ಒಂದಾದ ಡಿಜಿಟಲ್ ಅರೆಸ್ಟ್ ಇಂದು ಅನೇಕ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಹಣವನ್ನು ಪೀಕುವ ಜೊತೆಗೆ ಜನರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಅಂತೆಯೇ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರನ್ನು ಬೆದರಿಸಿದ ವಂಚಕರು 30.99 ಲಕ್ಷ ರೂ ಹಣ ದೋಚಿರುವ ಘಟನೆ ನಡೆದಿದೆ.

ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್​​ನ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ವಂಚನೆ ಮಾಡಲಾಗಿದ್ದು, ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್ಸ್​ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಅರೆಸ್ಟ್ ನಾಟಕವಾಡಿದ್ದಾರೆ. ಹೀಗೆ ವಂಚಕರು ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:UP: ಬಿಜೆಪಿ ಸಂಸದನ ಸಹೋದರಿ ಸ್ನಾನ ಮಾಡುವಾಗ ಕದ್ದು ವಿಡಿಯೋ ಮಾಡಿದ ಮಾವ – ಪ್ರಶ್ನಿಸಿದ್ದಕ್ಕೆ ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿತ!!

ನಂತರ ಆನ್‍ಲೈನ್​ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ನಂತರ ಆ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ. ಹೀಗೆ ಸತತ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿದ್ದ ವಂಚಕರ ಈ ವಂಚನೆ ಜಾಲ ಅರಿತ ಶಾಸಕ ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

You may also like