Tumkur: ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಇತ್ತೀಚಿಗೆ ವಿಧಾನಸಭೆ ಅಧಿವೇಶನದಲ್ಲಿ ಆರ್ ಎಸ್ ಎಸ್ ಗೀತೆಯನ್ನು ಹಾಡಿ ಕಾಂಗ್ರೆಸ್ ನಾಯಕರಿಂದ ಹಿಗ್ಗಾಮುಗ್ಗ ಜಾಡಿಸಿಕೊಂಡಿದ್ದರು. ಈ ವಿಚಾರ ತಣ್ಣಗಾಗುವ ಹೊತ್ತಿಗೆ ಇದೀಗ ಗೃಹ ಸಚಿವ ಪರಮೇಶ್ವರವರು ಎಬಿವಿಪಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು, ತುಮಕೂರು ಜಿಲ್ಲೆ ತಿಪಟೂರಿನಲ್ಲಿ ವೀರರಾಣಿ ಅಬ್ಬಕ್ಕ ಅವರ 500ನೇ ಜನ್ಮ ಜಯಂತಿ ಪ್ರಯುಕ್ತ ತಿಪಟೂರು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಶಾಖೆ ವತಿಯಿಂದ ರಥಯಾತ್ರೆ, ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭಾಗಿಯಾಗಿದ್ದು, ಸದ್ಯ ಈ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:America : ಡೊನಾಲ್ಡ್ ಟ್ರಂಪ್ ಆಪ್ತಮಿತ್ರನಿಗೆ ಗುಂಡಿಕ್ಕಿ ಭೀಕರ ಹತ್ಯೆ!!
ಒಂದೆಡೆ ಬಿಜೆಪಿ ಹಾಗೂ RSS ವಿರುದ್ಧ ರಾಹುಲ್ ಗಾಂಧಿ ಕೆಂಡ ಕಾರುತ್ತಿದ್ರೆ, ಇತ್ತ ರಾಜ್ಯ ಕಾಂಗ್ರೆಸ್ ಮುಂಚೂಣಿ ನಾಯಕರು RSS ಹಾಗೂ ಬಿಜೆಪಿ ಬಗ್ಗೆ ದ್ವಂದ್ವ ನೀತಿ ಅನುಸರಿಸುವ ಮೂಲಕ ಹೈ ಕಮಾಂಡ್ ಗೆ ಮುಜುಗರ ತಂದೊಡ್ಡಿದ್ದಾರೆ. ಹೀಗಾಗಿ ಪರಂ ಕಾರ್ಯಕ್ರಮದಲ್ಲಿ ಭಾಯಾಗಿರೋ ವಿಚಾರ ಕಾಂಗ್ರೆಸ್ ನಾಯಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪರಮೇಶ್ವರ್ ನಡವಳಿಕೆ ಬಗ್ಗೆ ಕೆಲ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
