Bike: ತಮ್ಮ ಊರಲ್ಲದೆ ಬೇರೆ ಊರುಗಳಲ್ಲಿ ಕೆಲಸವನ್ನು ಮಾಡುವವರು ಪ್ರತಿನಿತ್ಯವೂ ಕೆಲಸಕ್ಕೆ ಎಂದು ಬೇರೆಡೆಗೆ ಹೋಗುವುದು ಮತ್ತೆ ಅಲ್ಲಿಂದ ಮನೆಗೆ ಮರಳುವುದೇ ಒಂದು ದೊಡ್ಡ ಸಮಸ್ಯೆ. ಹಾಗೂ ಮಹಾನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗಂತೂ ಟ್ರಾಫಿಕ್ ಸಮಸ್ಯೆ, ಜೊತೆಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವ ತಲೆಬಿಸಿ. ಇದೆಲ್ಲದರ ನಡುವೆ ಪೆಟ್ರೋಲನ್ನು ನೀರು ಕುಡಿಯುವಂತೆ ಕುಡಿಯುವ ಬೈಕುಗಳು ಬೇರೆ. ಅನೇಕ ಉದ್ಯೋಗಿಗಳಂತೂ ತಮ್ಮ ಬೈಕ್ ಗೆ ಪೆಟ್ರೋಲ್ ಹಾಕಿಸಿಯೇ ಸುಸ್ತು ಹೊಡೆಯುತ್ತಾರೆ. ಆದರೆ ಇನ್ನು ಮುಂದೆ ಆ ಚಿಂತೆ ಬಿಡಿ. ಯಾಕೆಂದ್ರೆ ಬರಿ ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 70 ಕಿಲೋ ಮೀಟರ್ ಮೈಲೇಜ್ ಬಜಾಜ್ ಪ್ಲಾಟಿನ ಬೈಕು ನಿಮಗೆ ಬೆಸ್ಟ್ ಆಪ್ಷನ್ ಆಗಿದೆ.
ಹೌದು, ಪ್ರತಿದಿನವೂ ಆಫೀಸ್ ಹಾಗೂ ಮನೆಗೆ ಓಡಾಡುವ ಉದ್ಯೋಗಿಗಳಿಗೆ ಬಜಾಜ್ ಪ್ಲಾಟಿನಾ 100 (Bajaj Platina 100) ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇದರ ಬೆಲೆಯೂ ಕೂಡ ತುಂಬಾ ಕಡಿಮೆ. ಅದರಲ್ಲೂ ಕೇಂದ್ರ ಸರ್ಕಾರ ದ್ವಿಚಕ್ರ ವಾಹನಗಳ ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್ಟಿ ಪ್ರಮಾಣವನ್ನು 28% ರಿಂದ 18%ಗೆ ಇಳಿಸಿದೆ. ಪರಿಷ್ಕೃತ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. ಆ ಬಳಿಕ ‘ಪ್ಲಾಟಿನಾ 100’ ಬೆಲೆಯು ಮತ್ತಷ್ಟು ಕಡಿಮೆಯಾಗಲಿದೆ.
ಬೆಲೆ ಎಷ್ಟು?
ನೂತನ ಬಜಾಜ್ ಪ್ಲಾಟಿನಾ 100 ಬೈಕ್ ಅತಿ ಕಡಿಮೆ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಪ್ರಸ್ತುತ ರೂ.70,611 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಬೈಕಿನ ಫ್ಯೂಚರ್ಸ್ ಏನು?
ಹೊಸ ಬಜಾಜ್ ಪ್ಲಾಟಿನಾ 100 ಬೈಕ್ ಶಕ್ತಿಶಾಲಿಯಾದ ಪವರ್ಟ್ರೇನ್ನ್ನು ಹೊಂದಿದೆ. 102 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 7500 ಆರ್ಪಿಎಂನಲ್ಲಿ 7.9 ಬಿಹೆಚ್ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5500 ಆರ್ಪಿಎಂನಲ್ಲಿ 8.34 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್ಬಾಕ್ಸ್ನ್ನು ಒಳಗೊಂಡಿದೆ. ಇದು 11 ಲೀಟರ್ನಷ್ಟು ಫ್ಯುಯೆಲ್ ಟ್ಯಾಂಕ್ನ್ನು ಪಡೆದಿದೆ. ಅಲ್ಲದೆ 1 ಲೀಟರ್ ಗೆ 75 ರಿಂದ 90 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. 90 ಕೆಎಂಪಿಹೆಚ್ ಟಾಪ್ ಸ್ಪೀಡ್ನ್ನು ಪಡೆದಿದೆ. ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಇದನ್ನೂ ಓದಿ:World record: ಪುತ್ತೂರು: “ವಿಶ್ವದಾಖಲೆ” ಬರೆದ ನಾಲ್ಕು ವರ್ಷದ ಪೋರ!
ಇನ್ನು ಸದ್ಯ ಈ ಮೋಟಾರ್ಸೈಕಲ್ ರೂ.74,771 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 115 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 70 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟರ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ
