Home » Center Gvt: 10ನೇ ತರಗತಿ ಪಾಸಾದವರಿಗೆ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ – ಸಂಬಳ 60 ಸಾವಿರ

Center Gvt: 10ನೇ ತರಗತಿ ಪಾಸಾದವರಿಗೆ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ – ಸಂಬಳ 60 ಸಾವಿರ

0 comments

Central Gvt : ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಬ್ಯೂರೋ (IB) 455 ಭದ್ರತಾ ಸಹಾಯಕ (ಮೋಟಾರು ಸಾರಿಗೆ) ಹುದ್ದೆಗಳಿಗೆ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕೆ ಜಸ್ಟ್ 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ.

ಹೌದು, 10ನೇ ತರಗತಿ ಪಾಸಾದವರು ಹಾಗೂ ಮಾನ್ಯವಾದ ಲಘು ಮೋಟಾರು ವಾಹನ (LMV) ಪರವಾನಗಿಯ ಜೊತೆಗೆ ಕನಿಷ್ಠ ಒಂದು ವರ್ಷದ ಚಾಲನಾ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ:Egg: ಮೊಟ್ಟೆ ಪ್ರೆಶ್ ಆಗಿದೆಯೋ? ಹಾಳಾಗಿದೆಯೇ ಎಂದು ಈ ರೀತಿ ಸುಲಭವಾಗಿ ತಿಳಿಯಿರಿ

* ಸೆಪ್ಟೆಂಬರ್ 28, 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದ್ದು, ಅರ್ಜಿಗಳನ್ನು mha.gov.in ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.

* ಅರ್ಜಿ ಶುಲ್ಕ: ರೂ.100 + ರೂ.550 (ಸಂಸ್ಕರಣಾ ಶುಲ್ಕ).

* ವಯೋಮಿತಿ: 18 ರಿಂದ 27 ವರ್ಷ. ಮೀಸಲು ವರ್ಗದವರಿಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ ಇದೆ.

* ವೇತನ ಶ್ರೇಣಿ: ರೂ. 21,700 – 69,100 (Level-3 Pay Matrix) ಜೊತೆಗೆ ಸರ್ಕಾರದ ಭತ್ಯೆಗಳು ಹಾಗೂ ಪಿಂಚಣಿ ಸೌಲಭ್ಯಗಳು ಲಭ್ಯ.

* ಆಯ್ಕೆ ಪ್ರಕ್ರಿಯೆ: ಎರಡು ಹಂತದ ಪರೀಕ್ಷೆಗಳು, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

You may also like