UGCET: ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್ಗಳ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ್ದು, ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.13 ಕೊನೆ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಯುಜಿಸಿಇಟಿ ಕೋರ್ಸ್ಗಳಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಂತಹವರಿಗೆ ಯಾವುದೇ ಆಯ್ಕೆಗೂ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸೀಟು ಹಂಚಿಕೆಯಾದವರು ಇದುವರೆಗೂ ಶುಲ್ಕ ಪಾವತಿ ಮಾಡದೇ ಇದ್ದರೆ ಸೆ.13ರಂದು ಮಧ್ಯಾಹ್ನ 2.30ರೊಳಗೆ ಕಟ್ಟಬೇಕು. ಅದೇ ದಿನ ಸಂಜೆ 5.30ರೊಳಗೆ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು .
ಇದನ್ನೂ ಓದಿ:RBI: EMI ಕಟ್ಟದಿದ್ದರೆ ಲಾಕ್ ಆಗುತ್ತೆ ನಿಮ್ಮ ಮೊಬೈಲ್ – RBI ಹೊಸ ರೂಲ್ಸ್
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶದ ನಂತರ ಪ್ರಕಟಿಸಲಾಗುತ್ತದೆ. ಹಂಚಿಕೆಯಾಗದೆ ಉಳಿದಿರುವ 14,940 ಎಂಜಿನಿಯರಿಂಗ್ ಹಾಗೂ 413 ಆರ್ಕಿಟೆಕ್ಚರ್ ಕೋರ್ಸ್ ಗಳ ಸೀಟುಗಳನ್ನು ಆಯಾ ಕಾಲೇಜುಗಳಿಗೆ ಹಸ್ತಾಂತರಿಸಲಾಗಿದೆ. ಪ್ರವೇಶಕ್ಕೆ ಅಂತಿಮ ದಿನಾಂಕದ ನಂತರ ಉಳಿಯುವ ಹಂಚಿಕೆಯಾದ ಸೀಟುಗಳನ್ನೂ ಕೊನೆ ದಿನಾಂಕದ ನಂತರ ಕಾಲೇಜುಗಳಿಗೆ ನೀಡಲಾಗುವುದು ಎಚ್.ಪ್ರಸನ್ನ ತಿಳಿಸಿದ್ದಾರೆ.
