Home » Bangalore: ದೇಶದ ಮೊದಲ ಸೈಬ‌ರ್ ಕಮಾಂಡ್ ಸೆಂಟರ್ ಬೆಂಗಳೂರಲ್ಲಿ ಆರಂಭ

Bangalore: ದೇಶದ ಮೊದಲ ಸೈಬ‌ರ್ ಕಮಾಂಡ್ ಸೆಂಟರ್ ಬೆಂಗಳೂರಲ್ಲಿ ಆರಂಭ

0 comments

Bangalore: ಸೈಬ‌ರ್ ವಂಚನೆಗೆ ಕಡಿವಾಣ ಹಾಕಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ದೇಶದಲ್ಲೇ ಮೊದಲ ಸೈಬ‌ರ್ ಕಮಾಂಡ್ ಸೆಂಟ‌ರ್ ಅನ್ನು ಬೆಂಗಳೂರಲ್ಲಿ (Bangalore) ಆರಂಭಿಸಲಾಗಿದೆ. ಇನ್ನು ಪ್ರಣಬ್ ಮೊಹಂತಿಯವರನ್ನ ಡಿಐಜಿಯಾಗಿ ಕಮಾಂಡ್ ಸೆಂಟರ್‌ಗೆ ನೇಮಕ ಮಾಡಲಾಗಿದೆ.

ಕೇವಲ ಸೈಬರ್ ಫ್ರಾಡ್ ಪತ್ತೆಗೆ ಸಿದ್ದವಾಗಿರುವ ಕಮಾಂಡ್ ಸೆಂಟರ್‌ನಲ್ಲಿ ನಾಲ್ಕು ವಿಂಗ್‌ಗಳು ಕಾರ್ಯನಿರ್ವಹಣೆ ಮಾಡಲಿವೆ.

1. ಸೈಬರ್ ಕ್ರೈಂ ವಿಂಗ್:

ಸೈಬ‌ರ್ ಅಪರಾಧಗಳನ್ನ ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೆ.

2. ಸೈಬರ್ ಸೆಕ್ಯೂರಿಟಿ ವಿಂಗ್:

ಬ್ಯಾಂಕ್‌ ಖಾತೆ, ಸಾಮಾಜಿಕ ಜಾಲತಾಣ, ಸಾಫ್ಟ್‌ವೇರ್ ಹ್ಯಾಕ್ ಮಾಡುವವರನ್ನು ಪತ್ತೆ ಮಾಡುತ್ತೆ.

3. IDTU ವಿಂಗ್:

ಸೈಬ‌ರ್ ಅಪರಾಧಿಗಳ ಸ್ಥಳ ಪತ್ತೆ ಮಾಡುವುದು, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿಂದ ಮಾಹಿತಿ ಪಡೆಯುವುದು. ಐಪಿ ಅಡ್ರೆಸ್ ಪತ್ತೆ ಮಾಡುತ್ತೆ

4. ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನಜಾಗೃತಿ ದಳ:

ಸೈಬರ್ ಕಮಾಂಡ್‌ ಸೆಂಟರ್ ಅಧಿಕಾರಿಗಳಿಗೆ ತರಬೇತಿ ನೀಡುವುದು. ಟೆಕ್ನಿಕಲ್ ಜ್ಞಾನ ವೃದ್ಧಿ ಮಾಡುವುದು. ಹೊಸ ತಂತ್ರಜ್ಞಾನಗಳ ತಿಳುವಳಿಕೆ ನೀಡುವುದು. ಮತ್ತು ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳಿಗೆ ಸೈಬ‌ರ್ ಅಪರಾಧ ಅರಿವು ಮೂಡಿಸುವ ಕೆಲಸ ಮಾಡುತ್ತೆ.

ಇದನ್ನೂ ಓದಿ:Steel bottle: ಎಷ್ಟು ತೊಳೆದರೂ ಸ್ಟೀಲ್ ಬಾಟಲಿ ಸ್ಮೆಲ್ ಬರುತ್ತದೆಯಾ? ಇದೊಂದು ಎಲೆಯನ್ನು ಹಾಕಿ ನೋಡಿ ಚಮತ್ಕಾರ!!

You may also like