Chitradurga : ನಟ ದರ್ಶನ್ ಮತ್ತು ಅವರ ಗ್ಯಾಂಗ್ ನಿಂದ ಭೀಕರ ಹತ್ಯೆಗೆ ಒಳಗಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಕ್ಕೆ ಇದೀಗ ಆಧಾರವೇ ಇಲ್ಲದಂತಾಗಿದೆ. ಆರಂಭದಲ್ಲಿ ಅನೇಕರು ಕುಟುಂಬಕ್ಕೆ ಸಹಾಯ ಮಾಡಿದ್ದರೂ ನಂತರದಲ್ಲಿ ಅದು ನಿಂತು ಹೋಗಿದೆ. ಇದೀಗ ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸೋದಾಗಿ ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದಾರೆ.
ಹೌದು, ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದು 1 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ. ಜೊತೆಗೆ ಕುಟುಂಬ ರೇಣುಕಾಸ್ವಾಮಿಯನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಆತನ ಪತ್ನಿ ಸಹನಾಗೆ ಸರ್ಕಾರೀ ನೌಕರಿ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಕರೆ ಮಾಡಿ, ಮಠದ ಯಾವುದಾದರೂ ಸಂಸ್ಥೆಯಲ್ಲಿ ಸಹನಾ ಅವರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿರಿಗೆರೆಯ ತರಳಬಾಳು ಮಠದಲ್ಲೂ ಕೆಲಸ ಕೊಡಿಸಲು ಪ್ರಯತ್ನಿಸುವೆ. ಇಲ್ಲದಿದ್ದರೆ ಸರ್ಕಾರಿ ಅನುದಾನಿತ ಸಂಸ್ಥೆಯಲ್ಲಿ ಒಂದು ಕ್ಲರ್ಕ್ ಹುದ್ದೆಯನ್ನಾದರೂ ಕೊಡಿಸುತ್ತೇನೆ ಎಂದು ಶಾಸಕ ರಘುಮೂರ್ತಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಅನೇಕರು ಕುಟುಂಬಕ್ಕೆ ಸಹಾಯ ಮಾಡಿದ್ದರೂ ನಂತರದಲ್ಲಿ ಅದು ನಿಂತು ಹೋಗಿದೆ. ಇದೀಗ ರೇಣುಕಾಸ್ವಾಮಿ ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸೋದಾಗಿ ಚಳ್ಳಕೆರೆ ಕೈ ಶಾಸಕ ಟಿ ರಘುಮೂರ್ತಿ ಭರವಸೆ ನೀಡಿದ್ದಾರೆ.