Home » BMTC Bus: ಪ್ರಯಾಣಿಕರಿಗೆ ಸಿಹಿ ಸುದ್ದಿ: 40 ಕಿ.ಮೀ.ವರೆಗೂ ಬಿಎಂಟಿಸಿ ಸೇವೆ ವಿಸ್ತರಣೆ

BMTC Bus: ಪ್ರಯಾಣಿಕರಿಗೆ ಸಿಹಿ ಸುದ್ದಿ: 40 ಕಿ.ಮೀ.ವರೆಗೂ ಬಿಎಂಟಿಸಿ ಸೇವೆ ವಿಸ್ತರಣೆ

0 comments
Ramalinga Reddy

BMTC Bus: ಬೆಂಗಳೂರು ಕಾರ್ಪೋರೇಷನ್‌ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳ ಸೇವೆಯನ್ನು ಈಗ 40 ಕಿ.ಮೀ.ವರೆಗೂ ವಿಸ್ತರಿಸಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಮನಗರ ಬಸ್‌ ನಿಲ್ದಾಣದಲ್ಲಿ ನಗರ ಸಾರಿಗೆ ಬಸ್‌ ಸೇವೆಗೆ ಚಾಲನೆ ನೀಡಿ ಅವರು ಈ ಮಾತನ್ನು ಹೇಳಿದ್ದಾರೆ. 40 ಕಿ.ಮೀ ವರೆಗೂ ಬಿಎಂಟಿಸಿ ಬಸ್‌ ಸೇವೆ ವ್ಯವಸ್ಥೆಯಿಂದ ರಾಮನಗರ, ಚನ್ನಪಟ್ಟಣ, ಮಾಗಡಿಗೂ ಬಿಎಂಟಿಸಿ ಬಸ್‌ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Top Political Parties India: ಬಿಜೆಪಿ ಭಾರತದ ಅತಿದೊಡ್ಡ ಪಕ್ಷವಾಗಿದ್ದರೆ, ಎರಡನೇ ಸ್ಥಾನದಲ್ಲಿ ಯಾವ ರಾಜಕೀಯ ಪಕ್ಷವಿದೆ?

ರಾಮನಗರದಲ್ಲಿ ನಗರ ಸಾರಿಗೆ ಬಸ್‌ ಸೌಲಭ್ಯವಿದ್ದು, ಆದರೆ ಹೆಚ್ಚು ದಿನ ಇರಲಿಲ್ಲ. ಇದೀಗ ಜನಸಂಖ್ಯೆ ಹೆಚ್ಚಾಗಿರುವುದರಿಂದ ನಗರ ಸಾರಿಗೆ ಬಸ್‌ಗಳ ಸುದಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.

You may also like