Bigg Boss Kannada 12: ಸೆಪ್ಟೆಂಬರ್ 28ರಿಂದ ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ (Bigg Boss Kannada 12) ಸೀಸನ್ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್‌ಡೇಟ್‌ಗಳನ್ನು ಬಿಗ್‌ಬಾಸ್ ತಂಡ ಬಿಡುಗಡೆ ಮಾಡುತ್ತಿದೆ.
ಸೆಪ್ಟೆಂಬರ್ 28ರಂದು ಸಂಜೆ 6ಕ್ಕೆ ಬಿಗ್‌ಬಾಸ್ ಆರಂಭವಾಗಲಿದ್ದು, ಪ್ರತಿ ರಾತ್ರಿ 9:30ರಿಂದ 11ರವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 12ನೇ ಸೀಸನ್ ಪ್ರಸಾರವಾಗಲಿದೆ. ಇದರ ಮಧ್ಯೆ ಈ ಸಮಯದಲ್ಲಿ ಪ್ರಸಾರ ಆಗುತ್ತಿದ್ದ ಟಾಪ್ 3 ಧಾರಾವಾಹಿಗಳು ಮುಕ್ತಾಯವಾಗುತ್ತಿವೆ.
1.ದೃಷ್ಟಿಬೊಟ್ಟು
ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ದೃಷ್ಟಿಬೊಟ್ಟು’ ಧಾರಾವಾಹಿ ಸೆ. 21ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಕಾಣಲಿದೆ. ಈ ಬಗ್ಗೆ ನಿರ್ಮಾಪಕರಾದ ನಟ ರಕ್ಷ್ ಹಾಗೂ ಪತ್ನಿ ಅನುಷಾ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

2.ರಾಮಾಚಾರಿ
ಪ್ರತಿ ದಿನ ರಾತ್ರಿ 9:30ಕ್ಕೆ ಪ್ರಸಾರವಾಗುತ್ತಿರುವ ರಾಮಾಚಾರಿ ಅಂತಿಮ ಘಟಕ್ಕೆ ತಲುಪಿದ್ದು, ಸಾವಿರದ ಸಂಚಿಕೆಯನ್ನು ದಾಟಿದೆ. ಕೇವಲ 60 ಸಂಚಿಕೆಗಳು ಬಾಕಿ ಉಳಿದ್ದಿದ್ದು, ಬಿಗ್‌ಬಾಸ್ ಶುರುವಾದ ಕೆಲವು ದಿನಗಳವರೆಗೂ ರಾಮಾಚಾರಿ ಧಾರಾವಾಹಿ ಪ್ರಸಾರವಾಗಲಿದೆ. ಇದಾದ ನಂತರ ಅಂತ್ಯ ಹಾಡಲಿದೆ.

3.ನಿನಗಾಗಿ
ಸಮ್ಪೃಥ್ವಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ‘ನಿನಗಾಗಿ’ ಉತ್ತಮ ಜನಪ್ರಿಯತೆ ಹೊಂದಿದೆ. ಹೌದು, ನಟಿ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ನಟನೆಯಲ್ಲಿ ಮೂಡಿ ಬರುತ್ತಿರುವ ನಿನಗಾಗಿ ಧಾರಾವಾಹಿ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ ಇದೀಗ ನಿನಗಾಗಿ ಅಂತ್ಯ ಹಾಡೋದಕ್ಕೆ ಸಜ್ಜಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಒಟ್ಟಿನಲ್ಲಿ ಬಿಗ್‌ಬಾಸ್ ಪ್ರಸಾರಕ್ಕೆ ಈ ಮೂರು ಧಾರಾವಾಹಿಗಳಾದ ರಾಮಾಚಾರಿ, ದೃಷ್ಟಿಬೊಟ್ಟು ಹಾಗೂ ನಿನಗಾಗಿ ಮುಕ್ತಾಯ ಆಗಲಿವೆ.
ಇದನ್ನೂ ಓದಿ:Indigo: ಇಂಡಿಗೋ ಹೆಚ್ಚುವರಿ ನಿರ್ದೇಶಕರಾಗಿ ಅಮಿತಾಬ್ ಕಾಂತ್ ಆಯ್ಕೆ
