ಟೋಕಿಯೋ: ಇತ್ತೀಚೆಗೆ ಅಲ್ವೇನಿಯಾ ದೇಶವು ಎಐ ಆಧಾರಿತ ಸಚಿವರನ್ನು ನೇಮಿಸುವ ಮೂಲಕ ವಿಶ್ವದ ಗಮನ ಸೆಳೆದಿತ್ತು. ಈಗ ಜಪಾನ್ ದೇಶದ ಸರದಿ. ರಾಜಕೀಯ ಪಕ್ಷವೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ಕೃತಕ ಬುದ್ಧಿಮತ್ತೆ (ಎಐ) ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಜಪಾನ್ ಹೊಸ ಇತಿಹಾಸ ಸೃಷ್ಟಿಸಿದೆ.
ತನ್ನ ಮುಂದಿನ ಅಧ್ಯಕ್ಷರಾಗಿ ‘ಎಐ ಪೆಂಗ್ವಿನ್’ ಕಾರ್ಯನಿರ್ವಹಿಸಲಿದೆ ಎಂಬುದಾಗಿ ಜಪಾನ್ ‘ಸೇಸೇನೊ ಮಿಚಿ’ ಎಂಬ ಪ್ರಾದೇಶಿಕ ಪಕವು ಇತ್ತೀಚೆಗೆ ಘೋಷಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಚುನಾವಣೆಗಳಲ್ಲಿ ಈ ಪಕ್ಷವು ಎರಡು ಬಾರಿ ಸೋಲು ಕಂಡ ನಂತರ ಪಕ್ಷದ ಸಂಸ್ಥಾಪಕ ಶಿಂಜಿ ಇಶಿಮಾರು ಪಕ್ಷ ತೊರೆದಿದ್ದಾರೆ. ಆ ಸ್ಥಾನ ತುಂಬಲು ಎಐ ಅಧ್ಯಕ್ಷರನ್ನು ನೇಮಿಸಲಾಗಿದೆ ಎನ್ನಲಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಎಐ ಇರಲಿದ್ದು, ಅದರ ನಿರ್ವಹಣೆಯನ್ನು ಒಕುಮುರ ಎಂಬವರು ನೋಡಿಕೊಳ್ಳಲಿದ್ದಾರೆ. ಕ್ಯೋಟೋ ವಿ.ವಿ. ವಿದ್ಯಾರ್ಥಿ ಕೊಕಿ ಇಶಿಮಾರು ಪಕ್ಷ ತೊರೆದ ಬೆನ್ನಲ್ಲೇ ಒಕುಮುರ ಅವರನ್ನು ಪಕ್ಷವು ಒಮ್ಮತದ ಆಯ್ಕೆ ಮಾಡಿದ್ದು, ಅವರು ಎಐ ಮತ್ತು ಪಕ್ಷದ ನಡುವಿನ ಸಂಪರ್ಕವಾಗಿರುತ್ತಾರೆ.
ಇದನ್ನೂ ಓದಿ:PF ಬ್ಯಾಲೆನ್ಸ್ ಮತ್ತಿತರ ಸೇವೆಗಳು ಇನ್ನು ಒಂದೇ ಲಾಗಿನ್‌ಲ್ಲಿ ಲಭ್ಯ | ಪಾಸ್‌ಬುಕ್ ಲೈಟ್ ಆರಂಭ!
