Movie actor: ದೃಶ್ಯಂ ಖ್ಯಾತಿಯ ನಟಿ (Movie actor) ಎಸ್ತರ್ ಅನಿಲ್ ಅವರು ಜೀವನದಲ್ಲಿ ನಡೆದ ಕಹಿ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಪಿಂಕ್ ಪಾಡ್‌ಕ್ಯಾಸ್ಟ್ ಮಲಯಾಳಂಗೆ ನೀಡಿದ ಸಂದರ್ಶನದಲ್ಲಿ ‘ತಾವು ಕುಡಿತವನ್ನು ಪ್ರಯತ್ನಿಸಿ, ಅದು ಸರಿಹೊಂದದ ಕಾರಣ ಬಿಟ್ಟಿದ್ದಾಗಿ’ ಬಹಿರಂಗಪಡಿಸಿದ್ದಾರೆ.

ಕುಡಿತದ ಬಗ್ಗೆ ಯುವ ನಟಿ ಎಸ್ತರ್ ಅನಿಲ್ ಮುಕ್ತವಾಗಿ ಮಾತನಾಡಿದ್ದಾರೆ. ಮಲಯಾಳಂನ ದೃಶ್ಯಂ ಸಿನಿಮಾದ ಅನು ಜಾರ್ಜ್ ಪಾತ್ರದ ಮೂಲಕ ಫೇಮಸ್ ಆಗಿರುವ 24 ವರ್ಷದ ನಟಿ, ನಾನು ಕೆಲ ತಿಂಗಳ ಹಿಂದೆ ಕುಡಿಯೋದನ್ನು ಫ್ಯಾಷನ್ ರೀತಿ ಟ್ರೈ ಮಾಡಿದೆ. ಆದರೆ, ಡ್ರಿಂಕ್ಸ್ ಮಾಡೋದು ನನಗೆ ಸರಿಹೊಂದಲಿಲ್ಲ. ಆ ಕಾರಣದಿಂದಾಗಿ ಅದನ್ನು ತ್ಯಜಿಸಿದೆ ಎದು ಹೇಳಿದ್ದಾರೆ. ನಾನು ಹಾಗೂ ನನ್ನ ಸಹೋದರರು ಸಮಾನತೆಯಿಂದ ಬೆಳೆದಿದ್ದೇವೆ. ಮನೆಯಲ್ಲಿ ನನ್ನ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂದು ಎಸ್ತರ್ ಹೇಳಿದ್ದರೆ.
ನಾನು ಡ್ರಿಂಕಿಂಗ್‌ಅನ್ನು ಟ್ರೈ ಮಾಡಿದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಆಗೋದಿಲ್ಲ ಅನ್ನೋದು ಗೊತ್ತಾಯಿತು. ಕುಡಿದ ಅಮಲಿನಲ್ಲಿ ನಾನು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡ ನಂತರ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ.
ನಾನು ಕುಡಿದ ಮೊದಲ ದಿನ ಹೇಗಿತ್ತೆಂದರೆ, ಎದ್ದು ನಿಲ್ಲೋಕು ನನಗೆ ಸಾಧ್ಯವಾಗ್ತಾ ಇರಲಿಲ್ಲ. ಕೂಡಲೇ ನನ್ನ ಅಮ್ಮನಿಗೆ ಕರೆ ಮಾಡಿದೆ. ಆಕೆ, ಬರೋಕೆ ಆಗೋದಿಲ್ಲ ಎಂದರು. ಹಾಗಾಗಿ ಮನೆಗೆ ಹೇಗೆ ಹೋಗೋದು ಅನ್ನೋದೆ ಆಗ ನನಗೆ ಗೊತ್ತಾಗಿರಲಿಲ್ಲ ಎಂದು ನಟಿ ಹೇಳಿದ್ದಾರೆ.
