Home » IVF: ಭಾವನ ಮಾತ್ರ ಅಲ್ಲ, ಕನ್ನಡದ ಈ ಖ್ಯಾತ ನಟಿಗೆ ಮೊದಲೆ ಆಗಿತ್ತು IVF ಮಗು !!

IVF: ಭಾವನ ಮಾತ್ರ ಅಲ್ಲ, ಕನ್ನಡದ ಈ ಖ್ಯಾತ ನಟಿಗೆ ಮೊದಲೆ ಆಗಿತ್ತು IVF ಮಗು !!

0 comments

IVF: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಭಾವನ ರಾಮಣ್ಣ ಸದ್ಯ IVF ಮೂಲಕ ಗರ್ಭವತಿಯಾಗಿದ್ದು ರಾಜ್ಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೆಲ್ಲದರ ನಡುವೆ ನಟಿ ಭಾವನ ರಾಮಣ್ಣ ಅವರಿಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ ಭಾವನ ಅವರಿಗೆ ಮಗು ಜನಿಸಿದ ಖುಷಿ ಹೆಚ್ಚು ಇರಲಿಲ್ಲ. ಯಾಕೆಂದರೆ ಅವರ ಅವಳಿ ಮಕ್ಕಳಲ್ಲಿ ಒಂದು ಮಗು ಜನನವಾದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿತು. ಈ ಕುರಿತು ಭಾವನಾ ಅವರು ತಮ್ಮ ಕರಾಳ ಅನುಭವ ಹಂಚಿಕೊಂಡಿದ್ದರು. ಆದರೆ ನಿಮಗೆ ಗೊತ್ತಾ ಕನ್ನಡದ ಈ ಖ್ಯಾತ ನಟಿ ಭಾವನಾ ಅವರಿಗೂ ಮುಂಚೆ ಐವಿಎಫ್ ಮೂಲಕ ಮಗು ಪಡೆದಿದ್ದರು.

ಹೌದು, ಕನ್ನಡದ ಖ್ಯಾತ ನಟಿ ತಾರಾ ಅವರು IVF ಮೂಲಕ ಮಗುವನ್ನು ಪಡೆದಿದ್ದಾರೆ. ಇದೀಗ ಭಾವನಾ ಅವರ ಒಂದು ಮಗು ಮರಣ ಹೊಂದಿದ ಬಳಿಕ ಅವರು ಹಂಚಿಕೊಂಡ ತಮ್ಮ ಕರಾಳ ಅನುಭವವನ್ನು ಮನಗಂಡ ತಾರಾ ಅವರು ತಮ್ಮ ವಿಚಾರವನ್ನು ಹೇಳಿಕೊಂಡಿದ್ದು, ʻನನಗೂ ಐವಿಎಫ್‌ ಮೂಲಕ ಮಗು ಆಗಿರುವುದು. ಆ ಬಾಧೆ ನನಗೆ ಗೊತ್ತುʼ ಎಂದಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ನಟಿ ತಾರ ಅವರು ವರು “ಆಕೆಯ ವಿಚಾರದಲ್ಲಿ ನನಗೆ ತುಂಬಾ ನೋವಾಗಿದ್ದು, ಒಂದು ಮಗುವನ್ನ ಆಕೆ ಕಳೆದುಕೊಂಡಾಗ, ಅವಳಿಗೆ ಆಗಿರುವ ಅಷ್ಟೇ ನೋವು ನಿಜವಾಗಿಯೂ ಒಬ್ಬ ತಾಯಿಯಾಗಿ ನನಗೆ ಆಗಿದೆ. ಮಗುವನ್ನ ಹೆರುವ ಪ್ರಕ್ರಿಯೆ ತುಂಬಾ ಕಷ್ಟ. ಆಕೆಗೂ ಐವಿಎಫ್‌, ನನಗೂ ಐವಿಎಫ್‌ನಿಂದಲೇ ಮಗು ಆಗಿರುವುದು. ಆ ಬಾಧೆ ನನಗೆ ಗೊತ್ತು. ಯಾಕೆಂದರೆ, ನಾನು ಆ ಇಂಜೆಕ್ಷನ್‌ ತಗೊಂಡಾಗ, ದಪ್ಪ ಆಗಿರುವುದಾಗಲಿ, ಹಾರ್ಮೋನಲ್‌ ಇಂಬ್ಯಾಲೆನ್ಸ್‌ ಆಗಿರುವುದಾಗಲಿ, ಮೂಡ್‌ ಸ್ವಿಂಗ್ಸ್‌ ಆಗಿರಲಿ, ನಾನು ಪಟ್ಟ ಕಷ್ಟ ಆಗಿರಲಿ, ನನಗೆ ಗೊತ್ತು” ಎಂದು ಇತ್ತೀಚೆಗೆ ʻಗ್ಯಾರಂಟಿ ನ್ಯೂಸ್‌ʼಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Child Care: ಮಕ್ಕಳಿಗೆ ಡೈಪರ್ ಹಾಕಿದ್ರೆ ದದ್ದುಗಳು ಆಗ್ತಿದ್ರೆ ಏನು ಮಾಡಬೇಕು?

You may also like