Home » Charana: ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣ ಆರಂಭ

Charana: ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣ ಆರಂಭ

0 comments

Charana: ಚಾರಣ ತಾಣವಾಗಿರುವ ಕುಕ್ಕೆ ಸುಬ್ರಮಣ್ಯ ಸಮೀಪದ ಕುಮಾರಪರ್ವತ ಚಾರಣ ಶುಕ್ರವಾರದಿಂದ ಆರಂಭಗೊಂಡಿದೆ.

ಕುಮಾರ ಪರ್ವತ ಚಾರಣ ಕಳೆದ ಬೇಸಿಗೆ ಆರಂಭದಲ್ಲಿ ತಾತ್ಕಾಲಿಕ ಸ್ಥಗಿತಮಾಡಲಾಗಿದ್ದು ಇದೀಗ ಈ ವರ್ಷದ ಚಾರಣ ಶುಕ್ರವಾರದಿಂದ ಆರಂಭಗೊಂಡಿದೆ. ಈ ವರ್ಷ ಎಂದಿಗಿಂತ 10 ದಿನ ಮೊದಲು ಚಾರಣ ಆರಂಭಗೊಂಡಿದೆ.

ಕಳೆದ ವರ್ಷದ ನಿಯಮಾವಳಿಗಳಂತೆ ಚಾರಣ ಕೈಗೊಳ್ಳಬಹುದಾಗಿದೆ. ಚಾರಣದ ಸಮಯದಲ್ಲಿ ಜಾಗೃತೆಯಿಂದ ಚಾರಣ ಮಾಡಿ ಪ್ಲಾಸ್ಟಿಕ್ ಮುಕ್ತ ಕುಮಾರ ಪರ್ವತಕ್ಕೆ ಸಹಕರಿಸುವಂತೆ ಅಧಿಕಾರಿಗಳು, ಸಿಬ್ಬಂದಿಗಳು ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ;MP K Sudhakar wife: ಸಂಸದ ಕೆ.ಸುಧಾಕರ್‌ ಪತ್ನಿ ಡಾ.ಪ್ರೀತಿ ಡಿಜಿಟಲ್‌ ಅರೆಸ್ಟ್‌, ಲಕ್ಷ ಲಕ್ಷ ಹಣ ಗುಳುಂ

ಕುಮಾರಪರ್ವತ ಚಾರಣ ಕೈಗೊಳ್ಳಲು ಅರಣ್ಯ ವಿಹಾರ ಅರಣ್ಯ ಇಲಾಖೆಯ ವೆಬ್ಸೈಟ್ ಮೂಲಕ ನೋಂದಾಣಿ ಮಾಡಿ ಚಾರಣ ಕೈಗೊಳ್ಳಬೇಕಾಗಿದ್ದು, ನಿಗದಿತ ಮಿತಿ ಹಾಗೂ ಮಾರ್ಗಸೂಚಿಗಳ ಅನ್ವಯ ಪರಿಸರ ಸ್ನೇಹಿ ಚಾರಣ ಕೈಗೊಳ್ಳಲು ಅವಕಾಶ ನೀಡಲಾಗಿದೆ.

You may also like