Home » WhaP vehicle: ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ

WhaP vehicle: ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ

0 comments

WhaP vehicle: ರಕ್ಷಣಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಬಲವಾಗಿ ಬೆಳೆಯುತ್ತಿದೆ ಭಾರತ. ವಿದೇಶದಲ್ಲಿ ಭಾರತದ ಮೊದಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕವೊಂದು (Defence Manufacturing facility) ಸ್ಥಾಪನೆಯಾಗಿದೆ. ವ್ಹಾಪ್ ವಾಹನವು (WhaP vehicle) ಎಲ್ಲಾ ರೀತಿಯ ಹವಾಮಾನ ಮತ್ತು ಪ್ರದೇಶಗಳಲ್ಲೂ ಕ್ಷಿಪಣಿ, ಬಾಂಬು ಇತ್ಯಾದಿ ಹಲವು ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಲು ಉಪಯುಕ್ತವಾಗಿದೆ.

ಮೊರಾಕ್ಕೋದ ರಾಯಲ್ ಶಸಸ್ತ್ರ ಪಡೆಗಳ ಜೊತೆ ಜಂಟಿಯಾಗಿ ಈ ಘಟಕವನ್ನು ಟಿಎಎಸ್​ಎಲ್ ನಿರ್ವಹಿಸುತ್ತದೆ. ಆಫ್ರಿಕಾದ ಇತರ ದೇಶಗಳಿಗೆ ಸರಬರಾಜು ಮಾಡಲು ಈ ಘಟಕವನ್ನು ಬಳಸಿಕೊಳ್ಳಲಾಗಬಹುದು.

ಆಫ್ರಿಕಾ ಖಂಡಕ್ಕೆ ಸೇರಿದ ಮೊರಾಕ್ಕೋ ದೇಶದ ಬಂದರು ನಗರಿ ಕಾಸಬ್ಲಾಂಕಾದಲ್ಲಿ (Casablanca) ಭಾರತವು ರಕ್ಷಣಾ ತಯಾರಿಕಾ ಘಟಕ ಸ್ಥಾಪಿಸಿದೆ. ಹಲವಾರು ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿರುವ ಭಾರತ ಇದೇ ಮೊದಲ ಬಾರಿಗೆ ವಿದೇಶದಲ್ಲೇ ತನ್ನ ಶಸ್ತ್ರಾಸ್ತ್ರ ತಯಾರಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:Actor Ranbir Kapoor: ಎಲೆಕ್ಟ್ರಾಟನಿಕ್‌ ಸಿಗರೇಟ್‌ ಸೇದುವಿಕೆ; ನಟ ರಣಬೀರ್ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲು ಮಾನವ ಹಕ್ಕುಗಳ ಸಮಿತಿ ಒತ್ತಾಯ

ಭಾರತದ ಡಿಆರ್​ಡಿಒ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ 8×8 ವ್ಹೀಲ್ಡ್ ಆರ್ಮೋರ್ಡ್ ಪ್ಲಾಟ್​ಫಾರ್ಮ್ (Wheeled Armoured Platform) ಅನ್ನು ಈ ಘಟಕದಲ್ಲಿ ಅಸೆಂಬಲ್ ಮಾಡಲಾಗುತ್ತದೆ.

You may also like