Madhu Bangarappa: ವಿದ್ಯಾರ್ಥಿಗಳೆಲ್ಲರೂ ದಸರಾ ರಜೆಯ ಮಜೆ ಮಾಡುತ್ತಿದ್ದಾರೆ. ಆದರೆ ಶಿಕ್ಷಕರು ಮಾತ್ರ ಜಾತಿ ಸಮೀಕ್ಷೆ ನಡೆಸುತ್ತಿದ್ದಾರೆ. ಇದರ ನಡುವೆ ಶಿಕ್ಷಣ ಮಂತ್ರಿಗಳು ನೀಡಿರುವ ಹೇಳಿಕೆ ಒಂದು ರಾಜ್ಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಹೌದು, ಜಾತಿಗಣತಿ ಸಮೀಕ್ಷೆಗೆ ಶಿಕ್ಷಕರನ್ನು ನೇಮಿಸುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆಯೊಂದನ್ನ ನೀಡಿದ್ದರು. ರಜೆ ಇರುವಾಗಲಷ್ಟೇ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ರಜೆ ಮುಗಿದ ತಕ್ಷಣ ಶಾಲೆ ಆರಂಭವಾಗಲಿದೆ ಎಂದಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಮೂಲಾಗಿ ನೀಡಿದ ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗಿದೆ.
ಇದನ್ನೂ ಓದಿ:Mysore : ದಸರಾ ನಡುವೆ ಚಾಮುಂಡಿ ಬೆಟ್ಟದ ಅರ್ಚಕ ನಿಧನ – ಅರ್ಧ ದಿನ ದೇವಿಯ ದರ್ಶನ ಬಂದ್
ಅಂದರೆ ಶಾಲೆ ಆರಂಭವಾಗುವ ಹೊತ್ತಿಗೆ ಶಿಕ್ಷಕರೂ ಲಭ್ಯರಿರಲಿದ್ದಾರೆ ಎಂದು ಮಧು ಬಂಗಾರಪ್ಪ ನೀಡಿದ ಹೇಳಿಕೆಯ ಅರ್ಥವಾಗಿತ್ತು. ನಮಗೆ ಗೊತ್ತೇ ಇರಲಿಲ್ಲ. ನಾವು ರಜೆ ಮುಗಿದ ತಕ್ಷಣ ಮತ್ತೆ ರಜೆಯೇ ಎಂದುಕೊಂಡಿದ್ದೆವು ಎಂದು ಕೆಲವರು ಹೇಳಿದರೆ, ಸಚಿವರು ಹೊಸ ವಿಚಾರ ಹೇಳ್ತಿದ್ದಾರೆ. ರಜೆ ಮುಗಿದ ಮೇಲೆ ಶಾಲೆ ಎಂದು ನಮಗೆ ಗೊತ್ತೇ ಇರಲಿಲ್ಲ ಎಂದು ತಮಾಷೆ ಮಾಡಿದ್ದಾರೆ. ಇದನ್ನೇ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.
