5
SL Bhyrappa: ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ (SL Bhyrappa) ಅವರ ಅಂತ್ಯಕ್ರಿಯೆಯನ್ನು, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದೆ.
ಪದ್ಮಭೂಷಣ ಪುರಸ್ಕೃತರು, ಹಿರಿಯ ಸಾಹಿತಿ ಆಗಿದ್ದ ಡಾ.ಎಸ್‌ಎಲ್ ಭೈರಪ್ಪ ಅವರು ಇಂದು ನಿಧನರಾಗಿದ್ದು, ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ (Karnataka) ಆದೇಶಿಸಿದೆ.
