Anganwadi recruitment : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸೆಸೆಲ್ಸಿ ಪಾಸಾದ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ ಒದಗಿದ್ದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ.
ಹೌದು, ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಡಬ್ಲ್ಯೂಸಿಡಿ ದಕ್ಷಿಣ ಕನ್ನಡ) 277 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:E-mail: ನಿಮ್ಮ ಇ-ಮೇಲ್ ಸ್ಟೋರೇಜ್ ಫುಲ್ ಆಗಿದ್ಯಾ? ಜಸ್ಟ್ ಹೀಗೆ ಮಾಡಿ, ಒಟ್ಟಿಗೆ ಕ್ಲಿಯರ್ ಕೊಡಿ
ಆನ್ಲೈನ್ ಅರ್ಜಿಯು 02-09-2025 ರಂದು ಪ್ರಾರಂಭವಾಗುತ್ತದೆ ಮತ್ತು 10-10-2025 ರಂದು ಮುಕ್ತಾಯಗೊಳ್ಳುತ್ತದೆ. ಅಭ್ಯರ್ಥಿಗಳು ಅಧಿಕೃತ ಡಬ್ಲ್ಯೂಸಿಡಿ ದಕ್ಷಿಣ ಕನ್ನಡ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಂದರೆ ಡಬ್ಲ್ಯೂಸಿಡಿ ದಕ್ಷಿಣ ಕನ್ನಡ ವೆಬ್ಸೈಟ್, karnemakaone.kar.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಹತೆ ಗಳು:
* ವಯೋಮಿತಿ – ಕನಿಷ್ಠ 19 ವರ್ಷಗಳು, ಗರಿಷ್ಠ ವಯೋಮಿತಿ 35 ವರ್ಷಗಳು
* ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
* ಅಭ್ಯರ್ಥಿಗಳು 12ನೇ, 10ನೇ ತರಗತಿ ಪಾಸಾಗಿರಬೇಕು.
*ಒಟ್ಟು ಹುದ್ದೆ : ಅಂಗನವಾಡಿ ಕಾರ್ಯಕರ್ತೆ 56, ಅಂಗನವಾಡಿ ಸಹಾಯಕಿ 221
* ಅರ್ಜಿ ಸಲ್ಲಿಸುವ ಲಿಂಕ್
https://karnemakaone.kar.nic.in/abcd/home.aspx
