Health Tips: ಮನುಷ್ಯನಿಗೆ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಕೂಡಾ ಅಷ್ಟೇ ಮುಖ್ಯ. ಆದರಲ್ಲೂ ಹೃದಯದ ಸಮಸ್ಯೆ(heart problem), ಮಧುಮೇಹ, ದೇಹ ತೂಕ ಸೇರಿದಂತೆ ಬಹುತೇಕ ಖಾಯಿಲೆಗಳು ಮಾನಸಿಕ ಒತ್ತಡದಿಂದಾಗಿಯೇ ಬರುತ್ತವೆ. ಅದಕ್ಕಾಗಿ ಮಾನಸಿಕ ಒತ್ತಡ ಕಡಿಮೆ ಮಾಡಲು ಈ ವಿಧಾನಗಳನ್ನು (Health Tips) ತಪ್ಪದೇ ಅನುಸರಿಸಿ.
ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ?
ದೈಹಿಕ ಚಟುವಟಿಕೆ:
ದೇಹಕ್ಕೆ ಶ್ರಮ ಕೊಟ್ಟರೆ ಮಾನಸಿಕ ಒತ್ತಡ ಎನ್ನುವುದು ನೆನಪೇ ಆಗಲ್ಲ. ದೈಹಿಕ ಚಟುವಟಿಕೆ ಮಾಡುತ್ತಿದ್ದರೆ ನಿಮ್ಮ ಖುಷಿಯ ಹಾರ್ಮೋನ್ ಗಳು ಆಕ್ಟಿವೇಟ್ ಆಗುತ್ತವೆ.
ಉತ್ತಮ ನಿದ್ರೆ:
ಉತ್ತಮ ನಿದ್ರೆ(sleep) ಮಾಡದೇ ಇದ್ದಲ್ಲಿ ಮಾನಸಿಕ ಒತ್ತಡ ಕಂಡುಬರಬಹುದು. ಆದ್ದರಿಂದ ನಿದ್ರೆಗೆ ಪ್ರಾಮುಖ್ಯತೆ ಕೊಡಿ.
ಉತ್ತಮ ಆಹಾರ ಸೇವಿಸಿ:
ಸಮಯಕ್ಕೆ ಸರಿಯಾಗಿ ಸಮತೋಲಿತ, ಎಲ್ಲಾ ವಿಧದ ಪೋಷಕಾಂಶಗಳು ಒಳಗೊಂಡಂತಹ ಆಹಾರವನ್ನು (food)ಸೇವನೆ ಮಾಡಿ.
ಸೋಷಿಯಲ್(social) ಆಗಿ ಇರಿ:
ಸಮಾಜಮುಖಿಯಾಗಿ, ಇತರರೊಂದಿಗೆ ಮಾತನಾಡುತ್ತಾ, ಬೆರೆಯುತ್ತಾ ಇದ್ದರೆ ಒತ್ತಡ ಮರೆಯುತ್ತೀರಿ.
ದೇಹ, ಮನಸ್ಸಿಗೆ ವಿಶ್ರಾಂತಿ:
ಯೋಗ, ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
