Home » Dasara: ದಸರಾ ಪ್ರಯುಕ್ತ ಮೈಸೂರು KSRTC ಬಸ್‌ ಟಿಕೆಟ್‌ ದರ ಏರಿಕೆ

Dasara: ದಸರಾ ಪ್ರಯುಕ್ತ ಮೈಸೂರು KSRTC ಬಸ್‌ ಟಿಕೆಟ್‌ ದರ ಏರಿಕೆ

by ಹೊಸಕನ್ನಡ
0 comments
KSRTC Special Tour Package For Mangalore Dasara

   Dasara: ದಸರಾ (Dasara) ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆ ಮಾಡಿದೆ. ಬರೋಬ್ಬರಿ 20 ರೂ. ಬಸ್ ದರ ಏರಿಕೆ ಮಾಡಿದ್ದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.

ಸಾರಿಗೆ ಇಲಾಖೆ ಮೈಸೂರು ಮಾರ್ಗದ ಕೆಎಸ್ ಆರ್ಟಿಸಿ ಬಸ್ ದರವನ್ನ ಏರಿಕೆ ಮಾಡಿದೆ. ಎಲ್ಲಾ ಕೆಎಸ್ ಆರ್ಟಿಸಿ (KSRTC)ಬಸ್ ದರ ಬರೋಬ್ಬರಿ 20 ರೂಪಾಯಿ ಏರಿಕೆ ಮಾಡಿದೆ. ಇನ್ನೂ ಕೆಎಸ್‌ಆರ್‌ಟಿಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಇರಲಿದೆ.

ಯಾವ್ಯಾವ ಬಸ್‌ ಟಿಕೆಟ್‌ ದರ ಎಷ್ಟಿದೆ?

ಕರ್ನಾಟಕ ಸಾರಿಗೆ ವೇಗದೂತ 170 ರೂ. ನಿಂದ 190 ರೂ.ಗೆ

ತಡೆ ರಹಿತ ಸಾರಿಗೆ 210 ರಿಂದ 240 ರೂ.

ರಾಜಾಹಂಸ –270 ರಿಂದ 290 ರೂ.

ಐರಾವತ 430 ರಿಂದ 450 ರೂ.

ಐರಾವತ ಕ್ಲಬ್ ಕ್ಲಾಸ್ 440 ರಿಂದ 460 ರೂ.

ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

You may also like