BBK 12: ಬಿಗ್ ಬಾಸ್ ಕನ್ನಡ 12 ನೇ ಸೀಸನ್ (Bigg Boss) ಮನೆಗೆ ಕಾಲಿಡಲಿರುವ ನಾಲ್ಕನೇ ಸ್ಪರ್ಧಿ ಹೆಸರು ಕಲರ್ಸ್ ಕನ್ನಡ ರಿವೀಲ್ ಮಾಡಿದೆ. ಹೌದು, ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ನಿನ್ನೆ ಕ್ವಾಟ್ಲೆ ಕಿಚನ್‌ನ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿತ್ತು. ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು. ಇದೀಗ ನಾಲ್ಕನೇ ಸ್ಪರ್ಧಿ ಬಗ್ಗೆ ರಿವೀಲ್ ಮಾಡಲಾಗಿದೆ.
BBK 12 ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ ಇವರು ಸ್ಟೇಜ್ ಮೇಲೆ ಬರುವ ಪ್ರೋಮೋವನ್ನು ಕಲರ್ಸ್ ಬಿಡುಗಡೆ ಮಾಡಿದ್ದು, ನಮ್ಮ ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಅವರಿಗೆ ಸ್ವಾಗತ ಎಂದು ಸುದೀಪ್ ಹೇಳಿದ್ದಾರೆ. ಇವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ.. ಆದರೆ ತುಳು ಭಾಷೆ ಮಾತನಾಡುತ್ತಾರೆ. ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡುವ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಇದ್ದಾರೆ.
ಮೂಲತಃ ರಕ್ಷಿತಾ ಶೆಟ್ಟಿ ಮಂಗಳೂರಿನವರು. ಆದರೆ, ಮಂಗಳೂರಿನಲ್ಲಿ ಹುಟ್ಟಿದ್ದಾದರೂ ಬೆಳೆದಿದ್ದು ಮುಂಬೈನಲ್ಲಿ. ಇವರು ಬಿಬಿಎಂ ಓದಿದ್ದು ರಾಷ್ಟ್ರೀಯ ಕ್ರೀಡಾಪಟು ಕೂಡ ಹೌದು. ಸದ್ಯ ಮತ್ತೊಂದು ಇಂಟ್ರೆಸ್ಟಿಂಗ್ ಕಂಟೆಸ್ಟೆಂಡ್ ದೊಡ್ಮನೆಯೊಳಗೆ ಕಾಲಿಟ್ಟಿದ್ದು, ಹೇಗೆ ಆಡುತ್ತಾರೆ ನೋಡಬೇಕು.
