Home » Medicine: ನೀವು ಔಷಧಿಯೊಂದಿಗೆ ಎಷ್ಟು ನೀರು ಕುಡಿಯಬೇಕು?

Medicine: ನೀವು ಔಷಧಿಯೊಂದಿಗೆ ಎಷ್ಟು ನೀರು ಕುಡಿಯಬೇಕು?

0 comments

Medicine: ಸಾಮಾನ್ಯವಾಗಿ ಯಾವುದೇ ಅನಾರೋಗ್ಯದ ಮಾತ್ರೆ ನುಂಗಲು ನೀರು ಕುಡಿಯಲಾಗುತ್ತೆ. ಆದ್ರೆ ಔಷದಿ ಕುಡಿಯುವಾಗ ಎಷ್ಟು ನೀರು ಕುಡಿಯಬೇಕು ಎಂದು ಗೊತ್ತಿದೆಯಾ? ಇದಕ್ಕೆ ವೈದ್ಯರು ಏನು ಹೇಳುತ್ತಾರೆ ನೋಡೋಣ.

ಹೆಚ್ಚಿನ ಮಾತ್ರೆಗಳು ಮತ್ತು ಕ್ಯಾಪ್ಸೂಲ್ ಗಳನ್ನು ಕನಿಷ್ಠ 200-250 ಮಿಲಿ ನೀರಿನೊಂದಿಗೆ (water) ತೆಗೆದುಕೊಳ್ಳಬೇಕು. ಈ ಸರಳ ಅಭ್ಯಾಸವು ಅಸ್ವಸ್ಥತೆಯನ್ನು ತಡೆಯುವುದಲ್ಲದೆ ಔಷಧಿಗಳು (medicine) ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ;Central Gvt : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಸಂಬಳ ಹೆಚ್ಚಳದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್

ಎಷ್ಟು ನೀರು ಸಾಕಾಗುತ್ತದೆ?

ಪ್ರತಿ ಮಾತ್ರೆಯನ್ನು ಒಂದು ಪೂರ್ಣ ಲೋಟ ನೀರಿನೊಂದಿಗೆ (200-250 ಮಿಲಿ) ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ದೊಡ್ಡ ಮಾತ್ರೆಗಳಿಗೆ ಸಾಕಷ್ಟು ನೀರು ಕುಡಿಯುವುದರಿಂದ ಔಷಧಿಗಳು ಸುಲಭವಾಗಿ ಹೊಟ್ಟೆಗೆ ಚಲಿಸಲು ಮತ್ತು ವೇಗವಾಗಿ ಕರಗಲು ಸಹಾಯ ಮಾಡುತ್ತದೆ, ಇದು ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಎರಡನ್ನೂ ಸುಧಾರಿಸುತ್ತದೆ.

You may also like