Campa Sure: ರಿಲಯನ್ಸ್ ಇಂಡಸ್ಟ್ರೀಸ್ ನ ಇದರ ಮಾಲೀಕ ಮುಕೇಶ್ ಅಂಬಾನಿ ‘ಕ್ಯಾಂಪಾ ಶ್ಯೂರ್’ (Campa Sure) ಎಂಬ ಹೊಸ ಬ್ರಾಂಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಹೌದು, ದೇಶದ ಸುಮಾರು 30,000 ಕೋಟಿ ಮೌಲ್ಯದ ಈ ಬೃಹತ್ ಉದ್ಯಮದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಕಂಪನಿ ಮುಂದಾಗಿದೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (ಆರ್‌ಸಿಪಿಎಲ್) ‘ಕ್ಯಾಂಪಾ ಶ್ಯೂರ್’ ಬ್ರಾಂಡ್‌ಗಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ನೀರಿನ ಬಾಟ್ಲಿಂಗ್ ತಯಾರಕರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ.
‘ಕ್ಯಾಂಪಾ ಶ್ಯೂರ್’ ಬ್ರಾಂಡ್‌ನ ಪ್ರಮುಖ ಆಕರ್ಷಣೆಯೇ ಅದರ ಬೆಲೆಯಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಬಿಸ್ಲೆರಿ, ಕೋಕಾ-ಕೋಲಾದ ಕಿನ್ಲೆ ಮತ್ತು ಪೆಪ್ಸಿಕೋದ ಅಕ್ವಾಫಿನಾದಂತಹ ಪ್ರಮುಖ ಬ್ರಾಂಡ್‌ಗಳಿಗಿಂತ ಶೇ. 20-30ರಷ್ಟು ಕಡಿಮೆ ದರದಲ್ಲಿ ನೀರನ್ನು ಮಾರಾಟ ಮಾಡಲು ರಿಲಯನ್ಸ್ ನಿರ್ಧಾರ ಮಾಡಿದೆ.
ಇತರೆ ಬ್ರಾಂಡ್‌ಗಳು 20 ರೂ.ಗೆ ಮಾರಾಟ ಮಾಡಿದರೆ, ಕ್ಯಾಂಪಾ ಶ್ಯೂರ್ ಕೇವಲ 15 ರೂ.ಗೆ ಲಭ್ಯವಿರಲಿದೆ.
ಎರಡು ಲೀಟರ್ ಪ್ಯಾಕ್: ಸ್ಪರ್ಧಿಗಳ ಬೆಲೆ 30-35 ರೂ. ಇದ್ದು, ಕ್ಯಾಂಪಾ ಶ್ಯೂರ್ 25 ರೂ.ಗೆ ಸಿಗಲಿದೆ.
ಸಣ್ಣ ಪ್ಯಾಕ್: 250 ಮಿಲಿಲೀಟರ್ ಬಾಟಲಿಯ ಬೆಲೆ 5 ರೂ.ನಿಂದ ಆರಂಭವಾಗಲಿದೆ.
