Home » Tatkal Ticket : ಒಂದೇ ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಬುಕ್ ಆಗಬೇಕೆ? ಜಸ್ಟ್ ಹೀಗೆ ಮಾಡಿ ಸಾಕು

Tatkal Ticket : ಒಂದೇ ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಬುಕ್ ಆಗಬೇಕೆ? ಜಸ್ಟ್ ಹೀಗೆ ಮಾಡಿ ಸಾಕು

0 comments

 

Tatkal Ticket : ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ರೈಲು ಟಿಕೆಟ್ ಬುಕ್ ಮಾಡುವುದು ತುಂಬಾ ಕಷ್ಟವಾಗುತ್ತದೆ. ಒಮ್ಮೊಮ್ಮೆ ಟಿಕೆಟ್ ಕಾಲಿ ಇರುವುದಿಲ್ಲ, ನೆಟ್ವರ್ಕ್ ಸಮಸ್ಯೆ, ಹೀಗೆ ಬೇರೆ ಬೇರೆ ಕಾರಣಗಳಿಂದ ಟಿಕೆಟ್ ಖರೀದಿಸುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಪರಿಚಯಿಸಿ, ಜನರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಆದರೆ ಕೆಲವೊಮ್ಮೆ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಕೂಡ ಸಮಸ್ಯೆಯಾಗುತ್ತದೆ. ಆದರೆ ನೀವು ಈ ಒಂದು ಟಿಪ್ಸ್ ಯೂಸ್ ಮಾಡಿದರೆ ಒಂದೇ ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು.

 

 ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಸಮಯವೇ ಮುಖ್ಯ. ಒಂದು ನಿಮಿಷ ತಡವಾದರೂ ನಿಮ್ಮ ಟಿಕೆಟ್ ಕಳೆದುಹೋಗಿದೆ ಎಂದರ್ಥ.

ಎಸಿ ಟಿಕೆಟ್‌ಗಳು – ಬೆಳಿಗ್ಗೆ 10:00 ಗಂಟೆಗೆ ಹವಾನಿಯಂತ್ರಣ ರಹಿತ (ಸ್ಲೀಪರ್) ಟಿಕೆಟ್‌ಗಳು – ಬೆಳಿಗ್ಗೆ 11:00 ಗಂಟೆಗೆ ಬುಕ್ ಮಾಡಲು ಅವಕಾಶವಿರುತ್ತದೆ.

 

ಬುಕಿಂಗ್ ಸಮಯಕ್ಕೆ 10 ನಿಮಿಷಗಳ ಮೊದಲು IRCTC ವೆಬ್‌ಸೈಟ್‌ಗೆ ಲಾಗಿನ್ ಮಾಡಿ.

IRCTC ಯಲ್ಲಿ ಮಾಸ್ಟರ್ ಪಟ್ಟಿಯಲ್ಲಿ ನಿಮ್ಮ ಹೆಸರು, ವಯಸ್ಸಿನಂತಹ ನಿಮ್ಮ ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿ ಉಳಿಸಿ. ಇದು ಟೈಪಿಂಗ್ ಸಮಯವನ್ನು ಉಳಿಸುತ್ತದೆ.

ಪಾವತಿಸಲು UPI ಅಥವಾ IRCTC ವ್ಯಾಲೆಟ್ ಬಳಸಿ. ನೆಟ್ ಬ್ಯಾಂಕಿಂಗ್ ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ.. ನೀವು ನಿಮ್ಮ ಟಿಕೆಟ್ ಕಳೆದುಕೊಳ್ಳಬಹುದು.

ನಿಮಗೆ ರೈಲಿನಲ್ಲಿ ಟಿಕೆಟ್ ಸಿಗದಿದ್ದರೆ, ತಕ್ಷಣ ಬುಕ್ ಮಾಡಲು ಬೇರೆ ರೈಲು ಅಥವಾ ಹತ್ತಿರದ ನಿಲ್ದಾಣವನ್ನು ನೋಡಿ.

 

ಇನ್ನು ಈಗ ತತ್ಕಾಲ್‌ನಲ್ಲಿ ದೃಢೀಕೃತ ಸೀಟುಗಳನ್ನು ಮಾತ್ರ ನೀಡಲಾಗುತ್ತದೆ. ಏಜೆಂಟರು ಮೊದಲ ಅರ್ಧ ಗಂಟೆ ಬುಕ್ ಮಾಡಬಾರದು ಎಂಬ ಹೊಸ ನಿಯಮವನ್ನು ಹೊಂದಿದ್ದಾರೆ.ಒಬ್ಬ ವ್ಯಕ್ತಿ ಒಂದು ಬಳಕೆದಾರ ಐಡಿಯಿಂದ ಒಂದು ಟಿಕೆಟ್ ಮಾತ್ರ ಬುಕ್ ಮಾಡಬಹುದು.

You may also like