Home » Kantara – 1: ಅಂದು ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ್ದೆ: ಇಂದು 5,000ಕ್ಕೂ ಹೆಚ್ಚು ಹೌಸ್‌ಫುಲ್‌ ಶೋಗಳ ಅದ್ಭುತ ಪಯಣ: ರಿಷಬ್‌ ಶೆಟ್ಟಿ

Kantara – 1: ಅಂದು ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ್ದೆ: ಇಂದು 5,000ಕ್ಕೂ ಹೆಚ್ಚು ಹೌಸ್‌ಫುಲ್‌ ಶೋಗಳ ಅದ್ಭುತ ಪಯಣ: ರಿಷಬ್‌ ಶೆಟ್ಟಿ

0 comments

Kantara – 1: ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಯ ನಡುವೆ ನಟ-ನಿರ್ದೇಶಕ ರಿಷಬ್ ಶೆಟ್ಟಿ 9 ವರ್ಷಗಳ ಹಿಂದಿನ ತಮ್ಮ X ಪೋಸ್ಟ್ ರೀ ಪೋಸ್ಟ್ ಮಾಡಿ, ಸಿನಿಮಾ ಪ್ರೇಮಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ‘ಅವರಿವರ ಕೈಕಾಲು ಹಿಡಿದು ಮಂಗಳೂರಿನಲ್ಲಿ ಒಂದು ಶೋ ಸಿಕ್ಕಿತು” ಎಂದು ರಿಷಬ್ ತಮ್ಮ ಚೊಚ್ಚಲ ನಿರ್ದೇಶನದ ‘ರಿಕ್ಕಿ’ ಸಿನಿಮಾದ ಕುರಿತು ಬರೆದಿದ್ದರು. “ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ 5,000ಕ್ಕೂ ಹೆಚ್ಚು ಹೌಸ್‌ಫುಲ್‌ ಶೋಗಳ ಅದ್ಭುತ ಪಯಣ” ಎಂದು ರಿಷಬ್ ಬರೆದಿದ್ದಾರೆ.

ರಿಷಬ್ ಶೆಟ್ಟಿ ಅವರ ಚಿತ್ರ, ಕಾಂತಾರ ಅಧ್ಯಾಯ 1, ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ ಅದ್ಭುತವಾದ ಪ್ರದರ್ಶನ ಕಂಡಿದೆ. ಅಲ್ಲದೆ ಬಾಕ್ಸಾಫಿಸ್‌ ಕಲೆಕ್ಷನ್‌ ಗರಿಷ್ಠಮಟ್ಟದಲ್ಲಿ ಆಗಿದೆ. ಇನ್ನು ವಾರಾಂತ್ಯದಲ್ಲಿ ಚಿತ್ರವು ಇನ್ನಷ್ಟು ಗಳಿಕೆಯನ್ನು ನಿರೀಕ್ಷಿಸಲಾಗಿದೆ.

ಚಿತ್ರೋದ್ಯಮ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಕಾಂತಾರ ಅಧ್ಯಾಯ 1 ಭಾರತದಲ್ಲಿ ಎರಡನೇ ದಿನದಂದು ₹8.81 ಕೋಟಿ ನಿವ್ವಳ ಗಳಿಸಿದೆ. ಬೆಳಗಿನ ಪ್ರದರ್ಶನಗಳನ್ನು ಆಧರಿಸಿದ ವೆಬ್‌ಸೈಟ್‌ನಿಂದ ಇದು ಆರಂಭಿಕ ಅಂದಾಜಾಗಿದೆ. ಅಂಕಿಅಂಶಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಅಂತಿಮ ಅಂಕಿ ಅಂಶವು 2 ನೇ ದಿನದ ರಾತ್ರಿ ಪ್ರದರ್ಶನಗಳ ನಂತರವೇ ಬಹಿರಂಗಗೊಳ್ಳುತ್ತದೆ.

ಇದನ್ನೂ ಓದಿ;Sensex: ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 175 ಅಂಕಗಳ ಕುಸಿತ : ನಿಫ್ಟಿ 24,800ಕ್ಕಿಂತ ಇಳಿಕೆ

ಅಂದು ಒಂದು ಶೂಗಾಗಿ ಪರದಾಡಿದ್ದ ರಿಷಬ್‌ ಶೆಟ್ಟಿಯವರು ಇಂದು ದೇಶ ಮಾತ್ರವಲ್ಲದೇ ಇಡೀ ಪ್ರಪಂಚವೇ ಬೆರಗುಗಣ್ಣಿನಿಂದ ನೋಡುವಂತೆ ಚಿತ್ರವನ್ನು ಮಾಡಿದ್ದಾರೆ. ಇಂದು ಸಾವಿರಾರು ಥಿಯೇಟರ್‌ಗಳ ಮಾಲೀಕರು ತಾವಾಗೆ ಬಂದು ಶೂಗಾಗಿ ಬೇಡಿಕೆ ಇಡುತ್ತಿದ್ದಾರೆ. ಝೀರೋದಿಂದ ಮೇಲೇದ್ದ ಹೀರೋ ನಮ್ಮ ಕರಾವಳಿಯ ಪ್ರತಿಭೆ ರಿಷಬ್‌ ಶೆಟ್ಟಿಯವರು.

You may also like