Bigg Boss Kannada Season 12: ಕನ್ನಡ ಬಿಗ್‌ಬಾಸ್ ಸೀಸನ್ 12 ಪ್ರಾರಂಭವಾಗಿದ್ದು, ಆದರೆ ಈ ಬಾರಿ ಕೂಡಾ ಎಂದಿನಂತೆ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಮತ್ತೆ ಕನ್ನಡ ಬಿಗ್‌ಬಾಸ್‌ಗೆ ಸಂಕಷ್ಟ ಎದುರುರಾಗಿದೆ.
ಪೊಲೀಸರಿಂದ ಅನುಮತಿ ಪಡೆಯದೇ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ನೋಟಿಸ್ ನೀಡಲಾಗಿದೆ. ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋವನ್ನು ರಾಮನಗರದ ಬಿಡದಿ ಬಳಿಯ 35 ಎಕರೆ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಮಾಡಲಾಗುತ್ತಿದೆ. ಇದಕ್ಕೆ ಪೊಲೀಸರಿಂದ ಅನುಮತಿ ದೊರಕಿಲ್ಲ ಎಂದು ತಿಳಿದು ಬಂದಿದೆ.
ಈ ಮುಲಕ ಅನಧಿಕೃತವಾಗಿ ಶೋ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದು ಸಮಸ್ಯೆ ಉಂಟಾಗಿದೆ.
