Home » Nobel Prize: ವೈದ್ಯಕೀಯ ಕ್ಷೇತ್ರದಲ್ಲಿನ ಮಾನವೀಯ ಕೆಲಸಕ್ಕೆ ಮೂವರಿಗೆ ನೊಬೆಲ್‌ ಪ್ರಶಸ್ತಿ ಘೋಷಣೆ

Nobel Prize: ವೈದ್ಯಕೀಯ ಕ್ಷೇತ್ರದಲ್ಲಿನ ಮಾನವೀಯ ಕೆಲಸಕ್ಕೆ ಮೂವರಿಗೆ ನೊಬೆಲ್‌ ಪ್ರಶಸ್ತಿ ಘೋಷಣೆ

0 comments

Nobel Prize: ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ವಿಜ್ಞಾನಿಗಳಾದ ಅಮೆರಿಕದ ಮೇರಿ ಈ, ಬ್ರಂಕೋ, ಫ್ರೆಡ್ ರಾಮ್‌ಡೆಲ್ ಹಾಗೂ ಜಪಾನ್‌ನ ಶಿಮೋನ್ ಸಕಾಗು ಅವರಿಗೆ 2025ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಸ್ಟಾಕ್‌ ಹೋಮ್‌ನ ಕರೋಲಿನ್ಸಾ ಇನ್ ಸ್ಟಿಟ್ಯೂಟ್‌ ನಲ್ಲಿ ವೈದ್ಯಕೀಯ ನೊಬೆಲ್ ಪುರಸ್ಕೃತರ ಹೆಸರುಗಳನ್ನು ಸೋಮವಾರ ಪ್ರಕಟಿಸುವುದರೊಂದಿಗೆ ಈ ವರ್ಷದ ನೊಬೆಲ್ ಪುರಸ್ಕಾರ ಘೋಷಣೆಗೆ ಚಾಲನೆ ಸಿಕ್ಕಂತಾಗಿದೆ. ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಲ್ಲ ‘ಮೈಕ್ರೋಆರ್ ಎನ್‌ಎ’ ಆವಿಷ್ಕಾರಕ್ಕಾಗಿ ಅಮೆರಿಕದ ಎಕ್ಷರ ಆಯಂಬ್ರೌಸ್ ಮತ್ತು ಗ್ಯಾರಿ ರುಷ್ಯನ್ ಅವರಿಗೆ ಕಳೆದ ವರ್ಷ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ದೊರೆತಿತ್ತು.

ಇದನ್ನೂ ಓದಿ:Transfer: ರಾಜ್ಯ ಸರ್ಕಾರದಿಂದ ‘131 ಪೊಲೀಸ್ ಇನ್ಸ್ ಪೆಕ್ಟರ್’ ವರ್ಗಾವಣೆ

ಭೌತವಿಜ್ಞಾನ, ರಸಾಯನ ವಿಜ್ಞಾನ ಕ್ಷೇತ್ರಗಳ ಪ್ರಶಸ್ತಿ ವಿಜೇತರ ಹೆಸರನ್ನು ಕ್ರಮವಾಗಿ ಮಂಗಳವಾರ ಹಾಗೂ ಬುಧವಾರ ಪ್ರಕಟಿಸಲಾಗುತ್ತದೆ. ಸಾಹಿತ್ಯ ಕ್ಷೇತ್ರದ ಪುರಸ್ಕಾರವನ್ನು ಗುರುವಾರ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗುತ್ತದೆ. ಆ.13 ರಂದು ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರ ಘೋಷಿಸಲಾಗುತ್ತದೆ. ಡಿಸೆಂಬರ್ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

You may also like