Home » Bigg Boss-12 : ಬಿಗ್ ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ಮತ್ತೊಂದು ಶಾಕ್ – ನೋಟಿಸ್ ಜಾರಿ ಮಾಡಿದ ಬೆಸ್ಕಾಂ

Bigg Boss-12 : ಬಿಗ್ ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ಮತ್ತೊಂದು ಶಾಕ್ – ನೋಟಿಸ್ ಜಾರಿ ಮಾಡಿದ ಬೆಸ್ಕಾಂ

0 comments

Bigg Boss-12 : ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ -12 (Bigg Boss Kannada 12) ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ ನಲ್ಲಿ ಬಿಗ್‌ಬಾಸ್‌ ಶೋ ಚಿತ್ರೀಕರಣಕ್ಕೆ ನಿನ್ನೆ ರಾತ್ರಿ ಡಿಕೆಶಿ ಅವರು ಅವಕಾಶ ನೀಡಿದ್ದಾರೆ.  ನಿನ್ನೆಯ ಸಂಜೆಯ ಬೆಳವಣಿಗೆಯಲ್ಲಿ ಬಿಗ್ ಬಾಸ್ ಗೆ ಮತ್ತೆ ಶಾಕ್ ಎದುರಾಗಿದ್ದು ಬೆಸ್ಕಾಂನಿಂದ ನೋಟಿಸ್ ಜಾರಿ ಮಾಡಲಾಗಿದೆ.

ಹೌದು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಬಿಗ್ ಬಾಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಿದ್ಯುತ್ ಕಡಿತ ಮಾಡುವ ಕುರಿತು ಬೆಸ್ಕಾಂ ಬಿಗ್ ಬಾಸ್ ಮನೆಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.

ವೆಲ್ ಸ್ಟುಡಿಯೋಗೆ ನೋಟಿಸ್ ನೀಡಲು ಇದೀಗ ಬೆಸ್ಕಾಂ ಮುಂದಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಂಬಂಧ ನೀಡಲು ಮುಂದಾಗಿದೆ . ವೆಲ್ತ್ ಸ್ಟುಡಿಯೋಸ್ ಬಳಿಗೆ ಬೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡಲು ಆಗಮಿಸಿದ್ದಾರೆ ಜಾಲಿವುಡ್ ಸ್ಟುಡಿಯೋ ಬಳಿ ಬಂದ ಬಿಡದಿ AEE ಮೋಹಿತಾ ಆಗಮಿಸಿದ್ದು, ನೋಟಿಸ್ ಸ್ವೀಕರಿಸಲು ಯಾವುದೇ ಸಿಬ್ಬಂದಿ ಇಲ್ಲದ ಹಿನ್ನೆಲೆಯಲ್ಲಿ ಸ್ಟುಡಿಯೋದ ಗೇಟ್ ಸಿ ಬಳಿ ಬೆಸ್ಕಾಂ ಅಧಿಕಾರಿಗಳು ತೆರಳಿದ್ದಾರೆ.

You may also like