Home » AI Classroom: ಉಚಿತವಾಗಿ ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ

AI Classroom: ಉಚಿತವಾಗಿ ಎಐ ಕ್ಲಾಸ್‌ರೂಮ್ ಫೌಂಡೇಷನ್ ಕೋರ್ಸ್ ಆರಂಭಿಸಿದ ಜಿಯೋ

0 comments

AI Classroom: ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಉದ್ಘಾಟನೆಯಂದು ಎಐ ಕ್ಲಾಸ್‌ರೂಮ್ (AI Classroom) ಫೌಂಡೇಷನ್ ಕೋರ್ಸ್ ಆರಂಭಿಸಿರುವುದಾಗಿ ಜಿಯೋ (Jio) ಘೋಷಿಸಿದೆ.

ಪಿಸಿ (ಪರ್ಸನಲ್ ಕಂಪ್ಯೂಟರ್), ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬಳಸಿಕೊಂಡು ಯಾರು ಬೇಕಾದರೂ ಇದರ ಪ್ರವೇಶ ಪಡೆಯಬಹುದು. ಕಲಿಯುವವರು ಈ ಕೋರ್ಸ್ ಅನ್ನು ತಮ್ಮ ಜಿಯೋ ಸೆಟ್‌ಟಾಪ್ ಬಾಕ್ಸ್‌ನಲ್ಲಿ ಇರುವ ಜಿಯೋಪಿಸಿಯಲ್ಲಿ ತಮ್ಮ ಟಿವಿಗಳ ಮೂಲಕ ಕಲಿತುಕೊಳ್ಳಬಹುದು.

ಇದು ವಿಸ್ತೃತವಾದ ಕಲಿಕಾ ರೋಡ್ ಮ್ಯಾಪ್ ಆಗಿದ್ದು, ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರಮಾಣಪತ್ರ ದೊರೆಯುತ್ತದೆ. ಇತರ ಬಳಕೆದಾರರಿಗೆ ಕೋರ್ಸ್ ಪೂರ್ಣಗೊಳಿಸಿದ ನಂತರ ಪೂರ್ಣ ಮಾಡಿರುವಂಥ ಬ್ಯಾಡ್ಜ್ ದೊರೆಯುತ್ತದೆ.

ಈ ಕೋರ್ಸ್ ಎಐ ಬಗ್ಗೆ ಪ್ರಾಥಮಿಕ ಜ್ಞಾನವನ್ನು ನೀಡುತ್ತದೆ. ಸ್ಟೋರಿ, ಪ್ರೆಸೆಂಟೇಷನ್‌ಗಳು ಹಾಗೂ ಡಿಸೂನ್ ಸೃಷ್ಟಿಸಲು ಕಲಿತುಕೊಳ್ಳಬಹುದು. ನೈಜ ಸಮಸ್ಯೆಗಳನ್ನು ಎಐ ಬಳಸಿ ಹೇಗೆ ಪರಿಹರಿಸಬಹುದು. ಇದು ಒಟ್ಟು ನಾಲ್ಕು ವಾರದ ಕಲಿಕೆ ಹಾದಿಯಾಗಿದೆ.

ಕೋರ್ಸ್ ಪಠ್ಯಕ್ರಮ

ವಾರ 1: ಎಐ ಬೇಸಿಕ್ಸ್ ಹಾಗೂ ಪ್ರಾಂಪ್ಟ್ ಎಂಜಿನಿಯರಿಂಗ್

ವಾರ 2: ಎಐ ಫಾರ್ ಲರ್ನಿಂಗ್ ಹಾಗೂ ಕ್ರಿಯೇಟಿವಿಟಿ

ವಾರ 3: ಎಐ ಫಾರ್ ಬಿಲ್ಡಿಂಗ್ ಮತ್ತು ಕಮ್ಯುನಿಕೇಷನ್

ವಾರ 4: ಎಐ ಕ್ಯಾಪ್ ಸ್ಟೋನ್ ಪ್ರಾಜೆಕ್ಟ್

You may also like