Home » Pilchandi Daiva: ‘ದೈವದ ಹೆಸರಲ್ಲಿ ದುಡ್ಡು ಮಾಡಿದ್ರೆ ಆಸ್ಪತ್ರೆಗೆ ಸುರಿಸುತ್ತೇನೆ’ – ‘ಕಾಂತಾರ’ ವೀಕ್ಷಕರಿಗೆ ಎಚ್ಚರಿಕೆ ನೀಡಿದ ಪಿಲ್ಚಂಡಿ ದೈವ!!

Pilchandi Daiva: ‘ದೈವದ ಹೆಸರಲ್ಲಿ ದುಡ್ಡು ಮಾಡಿದ್ರೆ ಆಸ್ಪತ್ರೆಗೆ ಸುರಿಸುತ್ತೇನೆ’ – ‘ಕಾಂತಾರ’ ವೀಕ್ಷಕರಿಗೆ ಎಚ್ಚರಿಕೆ ನೀಡಿದ ಪಿಲ್ಚಂಡಿ ದೈವ!!

0 comments

Pilchandi Daiva: ಕಾಂತರಾ ಚಾಪ್ಟರ್ 1 ವಿಶ್ವದಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ಚಿತ್ರವೊಂದು ವಿಶ್ವಖ್ಯಾತಿಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಕರಾವಳಿಯ ಜಾನಪದ ಯ ಕಲೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ಈ ನಡುವೆ ಕರಾವಳಿಯಲ್ಲಿ ದೈವ ಒಂದು ನುಡಿದ ವಾಣಿ ಸಾಕಷ್ಟು ಸುದ್ದಿಯಾಗುತ್ತಿದೆ.

ಹೌದು, ದೈವದ ವೇಷ, ಹಾಕೋದು ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರು ಕಾಂತಾರಾ ಚಿತ್ರ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಈ ರೀತಿ ಮಾಡಿದರೆ ಅದು ದೈವಗಳಿಗೆ ಅವಮಾನ ಮಾಡಿದಂತೆ. ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಿನಿಮಾ ತಂಡ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಇಂತಹ ಕಿಡಿಗೇಡಿಗಳಿಗೆ ಇದೀಗ ದೈವವೂ ಕೂಡ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:India: ಭಾರತದಲ್ಲಿ 9 ಬ್ರಿಟಿಷ್‌ ವಿವಿ ಕ್ಯಾಂಪಸ್‌ಗಳ ಸ್ಥಾಪನೆ: ಬ್ರಿಟನ್‌ ಪ್ರಧಾನಿ ಘೋಷಣೆ

‘ಕಾಂತಾರ’ ಚಿತ್ರದ ವಿರುದ್ಧ ದೈವದ ಅಪಹಾಸ್ಯದ ಆರೋಪದ ಹಿನ್ನೆಲೆಯಲ್ಲಿ, ಕೆಲವು ದೈವಾರಾಧಕರು ಪಿಲ್ಚಂಡಿ ದೈವದ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ‘ನಾನು ನಿಮ್ಮ ಹಿಂದಿದ್ದೇನೆ, ನಿಮ್ಮ ಹೋರಾಟ ಮುಂದುವರೆಸಿ. ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ಹೇಳುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ. ಅಷ್ಟೇ ಅಲ್ಲದೆ ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು (ಆದಾಯವನ್ನು) ಆಸ್ಪತ್ರೆಗೆ ಸುರಿಸುವಂತೆ ಮಾಡುತ್ತೇನೆ ಎಂದೂ ಹೇಳಿದೆ.

You may also like