SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದು ತನ್ನ ಸಂಸ್ಥೆಯಲ್ಲಿ ಸುಮಾರು ಶೇಕಡ 30ರಷ್ಟು ಮಹಿಳಾ ಉದ್ಯೋಗಿಗಳಿಗೆ ಅವಕಾಶವನ್ನು ಮಾಡಿಕೊಟ್ಟಿದೆ.
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ತನ್ನ ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 2030ರ ವೇಳೆಗೆ ತನ್ನ ಒಟ್ಟು ಉದ್ಯೋಗಿಗಳಲ್ಲಿ ಮಹಿಳೆಯರ ಪ್ರಮಾಣವನ್ನು ಶೇ. 30ಕ್ಕೆ ಹೆಚ್ಚಿಸುವ ಗುರಿಯನ್ನು ಬ್ಯಾಂಕ್ ಹಾಕಿಕೊಂಡಿದೆ.
ಇದನ್ನೂ ಓದಿ:Smruthi Mandana : ವಿರಾಟ್ ಕೊಹ್ಲಿಯ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ!!
ಎಸ್‌ಬಿಐನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ (ಎಚ್‌ಆರ್) ಕಿಶೋರ್ ಕುಮಾರ್ ಪೊಲುದಾಸು ಈ ಕುರಿತಾಗಿ ಮಾತನಾಡಿದ್ದು, ಪ್ರಸ್ತುತ, ಎಸ್‌ಬಿಐನ ಒಟ್ಟು 2.4 ಲಕ್ಷ ಉದ್ಯೋಗಿಗಳಲ್ಲಿ ಶೇ. 27ರಷ್ಟು ಮಹಿಳೆಯರು ಇದ್ದಾರೆ. ಆದರೆ, ಮುಂಚೂಣಿ ಸಿಬ್ಬಂದಿಯಲ್ಲಿ ಈ ಪ್ರಮಾಣವು ಈಗಾಗಲೇ ಶೇ. 33ರಷ್ಟಿದೆ. ಈ ಅಂತರವನ್ನು ಕಡಿಮೆ ಮಾಡಿ, ಸಂಸ್ಥೆಯ ಎಲ್ಲಾ ಹಂತಗಳಲ್ಲಿ ಲಿಂಗ ವೈವಿಧ್ಯತೆಯನ್ನು ಬಲಪಡಿಸಲು ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
