Home » Bengaluru: ಇಂಜೆಕ್ಷನ್‌ ನೀಡಿ ವೈದ್ಯೆ ಪತ್ನಿಯ ಕೊಂದ ಗಂಡ ಡಾಕ್ಟರ್‌: 6 ತಿಂಗಳ ನಂತರ ಸತ್ಯ ಬೆಳಕಿಗೆ, ಅರೆಸ್ಟ್‌

Bengaluru: ಇಂಜೆಕ್ಷನ್‌ ನೀಡಿ ವೈದ್ಯೆ ಪತ್ನಿಯ ಕೊಂದ ಗಂಡ ಡಾಕ್ಟರ್‌: 6 ತಿಂಗಳ ನಂತರ ಸತ್ಯ ಬೆಳಕಿಗೆ, ಅರೆಸ್ಟ್‌

0 comments

Bengaluru: ಬೆಂಗಳೂರಲ್ಲೊಬ್ಬ ವೈದ್ಯ ತನ್ನ ವೈದ್ಯೆ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದಿದ್ದು, ಇದೊಂದು ಸ್ವಾಭಾವಿಕ ಸಾವು ಎಂದು ಬಿಂಬಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ನಡೆದ 6 ತಿಂಗಳ ನಂತರ ಅಸಲಿ ಸತ್ಯ ಹೊರ ಬಂದಿದೆ. ಪೊಲೀಸರು ಆರೋಪಿ ಡಾ.ಮಹೇಂದ್ರ ರೆಡ್ಡಿಯನ್ನು ಬಂಧನ ಮಾಡಿದ್ದಾರೆ.

ಮೇ 26,2024 ರಂದು ಡಾ.ಮಹೇಂದ್ರ ರೆಡ್ಡಿ ಮತ್ತು ಡಾ.ಕೃತಿಕಾ ರೆಡ್ಡಿ ವಿವಾಹ ಆಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್‌, ಲೋಶುಗರ್‌ ಸಮಸ್ಯೆಯಿಂದ ಬಳಲುತ್ತಿದ್ದರು, ಈ ವಿಷಯವನ್ನು ಕುಟುಂಬದವರು ಮುಚ್ಚಿಟ್ಟು ಅದೇ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದ ಡಾ.ಮಹೇಂದ್ರ ರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ಪತಿಗೆ ಗೊತ್ತಾಗಿದೆ.

ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರ ರೆಡ್ಡಿ ಪ್ಲ್ಯಾನ್‌ ಮಾಡಿದ್ದ. ತವರುಮನೆಯಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಮಲಗಿದ್ದ ಸಂದರ್ಭದಲ್ಲಿ ಈತ ಆಕೆಗೆ ಐವಿ ಇಂಜೆಕ್ಷನ್‌ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ನಂತರ ಜ್ಞಾನ ತಪ್ಪಿದ ಕೃತಿಕಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ಅಷ್ಟರಲ್ಲೇ ಆಗಿ ಸಾವಿಗೀಡಾಗಿರುವ ಕುರಿತು ವೈದ್ಯರು ಹೇಳಿದ್ದರು.

ಆಸ್ಪತ್ರೆಯಿಂದ ಡೆತ್‌ ಮೆಮೊ ಬಂದ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಈ ಕುರಿತು ದೂರು ನೀಡುವಂತೆ ತಿಳಿಸಿದ್ದರು. ಕುಟುಂಬಸ್ಥರ ದೂರಿನನ್ವಯ ಯುಡಿಆರ್‌ ದಾಖಲು ಮಾಡಿದ್ದ ಮಾರತಹಳ್ಳಿ ಪೊಲೀಸರು, ಮೃತ ದೇಹದ ಸ್ಯಾಂಪಲ್‌ ಪಡೆದು FSL ಗೆ ಕಳುಹಿಸಿದ್ದರು. ಅದರ ವರದಿಯನ್ವಯ ಕೃತಿಕಾ ಸಾವಿಗೆ ದೇಹದಲ್ಲಿ ಕಂಡು ಬಂದ ಅನಸ್ತೇಶಿಯಾ ಅಂಶ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಯುಡಿಆರ್‌ ಪ್ರಕರಣವನ್ನು ಕೊಲೆ ಕೇಸ್‌ ಆಗಿ ಪರಿವರ್ತನೆ ಮಾಡಿರುವ ಆರೋಪಿ ಡಾ.ಮಹೇಂದ್ರ ರೆಡ್ಡಿಯನ್ನು ಬಂಧನ ಮಾಡಿದ್ದಾರೆ.

You may also like