10
Sabarimala: ತುಳಮಾಸ ಪೂಜೆಗಳಿಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಇಂದು ತೆರೆದಿದೆ. ತುಳಮಾಸ ಪೂಜೆ ಆರಂಗೊಳ್ಳುತ್ತಿದ್ದಂತೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಪಟಣಾಂತಿಟ್ಟದಲ್ಲಿರುವ ಶಬರಿಮಲೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.
ಅಕ್ಟೋಬರ್ 22 ರವರೆಗೆ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಮುಂದಿನವಾರ ಅಕ್ಟೋಬರ್ 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಸಿದ್ಧತೆಗಳು, ಭದ್ರತಾ ವ್ಯವಸ್ಥೆಗಳು ಜೋರಾಗಿ ನಡೆಯುತ್ತಿದೆ.
