Health: ಕೈಯಲ್ಲಿ ಬೇಕಾದಷ್ಟು ದುಡ್ಡು ಇದ್ರೂ ಆರೋಗ್ಯ ಇಲ್ಲ ಅಂದ್ರೆ ನೆಮ್ಮದಿ ಇರಲ್ಲ. ಆದ್ದರಿಂದ ಮೊದಲು ನಿಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಂಡಾಗ ಜೀವನವನ್ನು ಸುಂದರವಾಗಿ ಅನುಭವಿಸಲು ಸಾಧ್ಯ. ಹೌದು, ಹಾಗಾದ್ರೆ ಆ ಅಭ್ಯಾಸಗಳು ಯಾವುದು ಇಲ್ಲಿದೆ ನೋಡಿ.
1. ಪ್ರತಿದಿನ ಅರ್ಧ ಗಂಟೆ ನಡೆಯಿರಿ.
2. ಪ್ರತಿದಿನ 20 ನಿಮಿಷ ಯೋಗಕ್ಕೆ ಮೀಸಲಿಡಿ.
3. ಪ್ರತಿದಿನ ಕನಿಷ್ಠ 3 ಲೀಟರ್ ನೀರು ಕುಡಿಯಿರಿ.
4. ಪ್ರತಿದಿನ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ.
5. ಬೆಳಿಗ್ಗೆ ಹೆಚ್ಚು, ಮಧ್ಯಾಹ್ನ ಮಧ್ಯಮವಾಗಿ ಮತ್ತು ರಾತ್ರಿ ಕಡಿಮೆ ಊಟ ಮಾಡಿ
6. ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡಿ.
7. ಪ್ರತಿದಿನ 15 ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳಿ.
8. ಪ್ರತಿದಿನ ಕನಿಷ್ಠ ಮೂರು ಜನರನ್ನು ನಗುವಂತೆ ಮಾಡಿ.
9. ಮದ್ಯಪಾನ ಮತ್ತು ಧೂಮಪಾನದಂತಹ ಚಟಗಳಿಂದ ದೂರವಿರಿ.
10. ನಿಮ್ಮ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಎಣ್ಣೆಯ ಪ್ರಮಾಣ ಆದಷ್ಟು ಕಮ್ಮಿ ಇರಲಿ.
