Home » Government Bans RSS: ಸಂಘ ಕಾರ್ಯಕ್ಕೆ ಬ್ರೇಕ್‌, ಸರಕಾರದಿಂದ ಅಧಿಕೃತ ಆದೇಶ!

Government Bans RSS: ಸಂಘ ಕಾರ್ಯಕ್ಕೆ ಬ್ರೇಕ್‌, ಸರಕಾರದಿಂದ ಅಧಿಕೃತ ಆದೇಶ!

0 comments

RSS Activities in Public: ರಾಜ್ಯಾದ್ಯಂತ ಶಾಲಾ-ಕಾಲೇಜು ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ʼತುರ್ತುʼ ಎಂಬ ಶೀರ್ಷಿಕೆಯ ಜೊತೆಗೆ ಒಳಾಡಳಿತ ಇಲಾಖೆ ಈ ಕುರಿತು ಆದೇಶ ಹೊರಡಿಸಲಾಗಿದೆ. ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ಹೊರಡಿಸಲು ಕೂಡಲೇ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಅನುಮತಿ ಪಡೆಯದೇ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡರೆ ʼಅಕ್ರಮ ಪ್ರವೇಶʼ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೊಸ ಆದೇಶದ ಪ್ರಕಾರ, ಶಾಲೆ, ಕಾಲೇಜು ಆವರಣಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡುವ ಅಧಿಕಾರ ಶಿಕ್ಷಣ ಇಲಾಖೆಗೆ ಸೇರಿದೆ. ಆಟದ ಮೈದಾನ, ಪಾರ್ಕ್‌ ಮತ್ತು ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡಲು ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಕ್ಷಮ ಪ್ರಾಧಿಕಾರಗಳಾಗಿರುತ್ತದೆ. ಸಾರ್ವಜನಿಕ ರಸ್ತೆಗಳು, ಸರಕಾರದ ಇತರ ಆಸ್ತಿ ಮತ್ತು ಸ್ಥಳಗಳಿಗೆ ಸಂಬಂಧಿಸಿದಂತೆ ಡಿಸಿ, ಎಸ್ಪಿ ಮತ್ತು ಪೊಲೀಸ್‌ ಆಯುಕ್ತರು ಸಕ್ಷಮ ಪ್ರಾಧಿಕಾರ ಎಂದು ನಿಗದಿಮಾಡಿದೆ.

You may also like