Home » Ration Card: ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ, ಇಂದಿರಾ ಕಿಟ್‌ ವಿತರಣೆ

Ration Card: ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ, ಇಂದಿರಾ ಕಿಟ್‌ ವಿತರಣೆ

0 comments
Ration Card

Ration Card: ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ಪೋಷಕಾಂಶ ಹೊಂದಿದ ಪದಾರ್ಥ ಒಳಗೊಂಡ ಇಂದಿರಾ ಕಿಟ್‌ ಸಿಗಲಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ತೊಗರಿಬೇಳೆ, ಅಡುಗೆ ಎಣ್ಣೆ, ಹೆಸರು ಕಾಳು, ಸಕ್ಕರೆ, ಉಪ್ಪು ಖರೀದಿ ಮಾಡಲು ಪ್ರತ್ಯೇಕ ಟೆಂಡರ್‌ ಕರೆದು, ಪ್ಯಾಕಿಂಗ್‌ ಮಾಡುವುದು, ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗೆ ಸಾಗಾಣೆ ಮಾಡಲು ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು ಸೇರಿ ಇತ್ಯಾದಿ ರೂಪುರೇಷೆ ಸಿದ್ದಪಡಿಸಲಾಗಿದೆ.

ಅಕ್ಕಿ ಬದಲಿಗೆ ನಗದು ವರ್ಗಾವಣೆ ವ್ಯವಸ್ಥೆಯನ್ನು 2023 ಜುಲೈ 10 ರಿಂದ ಸರಕಾರ ಜಾರಿಗೊಳಿಸಿದ್ದು, 2025ರ ಜನವರಿಗೆ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತಿತ್ತು. ಫೆಬ್ರವರಿಯಿಂದ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ ಐದು ಕೆಜಿ ವಿತರಿಸಲಾಗುತ್ತಿದೆ.

ಇದರಿಂದ ಸರಕಾರಕ್ಕೆ ವಾರ್ಷಿಕವಾಗಿ 6430 ಕೋಟಿ ರೂ ಬೇಕಾಗುವುದು. ಕಿಟ್‌ ವಿತರಣೆಗೆ 6119 ಕೋಟಿ ರೂ ಖರ್ಚಾಗುತ್ತದೆ. ಇದರಿಂದ ಸರಕಾರಕ್ಕೆ ಸುಮಾರು 300 ಕೋಟಿ ರೂ. ಉಳಿತಾಯವಾಗುತ್ತದೆ. ಈ ಕಾರಣದಿಂದ ಬಿಪಿಎಲ್‌, ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್‌ ನೀಡಲಾಗುವುದು. ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಕಿಟ್‌ನಲ್ಲಿ ಇರುತ್ತದೆ. ಸದಸ್ಯರ ಆಧಾರದಲ್ಲಿ ಆಹಾರ ಧಾನ್ಯ ಕಿಟ್‌ ನೀಡಲಾಗುವುದು. ಈ ಯೋಜನೆ ಒಂದೆರಡು ತಿಂಗಳಲ್ಲಿ ಜಾರಿಗೊಳ್ಳುವ ಸಾಧ್ಯತೆಯಿದೆ.

You may also like