7
Dakshina Kannada: ದೀಪಾವಳಿ ಹಬ್ಬದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರ ಜನಸಂಖ್ಯೆ ಹೆಚ್ಚಿದೆ. ಧನ ತ್ರಯೋದಶಿ ದಿನದಂದು ಕುಕ್ಕೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದ್ದಾರೆ.
ನಾಗ ಪ್ರತಿಷ್ಠಾ ಮಂಟಪದ ಮುಂಭಾಗದಲ್ಲಿ ನಾಗ ಪ್ರತಿಷ್ಠೆ ಸೇವೆಗಾಗಿ ಅಧಿಕ ಸಂಖ್ಯೆಯ ಭಕ್ತರು ಸೇರಿದ್ದರು. ಮಧ್ಯಾಹ್ನದ ಮಹಾಪೂಜೆಗಾಗಿ ಬೆಳಗ್ಗೆ 11.30 ರಿಂದಲೇ ಶ್ರೀ ದೇಗುಲದ ಒಳಾಂಗಣ ಪ್ರವೇಶ ನಿಷಿದ್ಧವಾಗಿದ್ದರಿಂದ ಹನ್ನೆರಡು ಗಂಟೆಯ ಮಹಾಪೂಜೆ ಕಳೆದ 12.20ರಿಂದ ಭಕ್ತರನ್ನು ಶ್ರೀ ದೇವರ ದರ್ಶನಕ್ಕೆ ಬಿಡಲಾಯಿತು.
