Dr Kruthika Reddy Case: ವೈದ್ಯ ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಕೃತಿಕ ದೇಹ ಹೊಕ್ಕಿದ್ದ ಮಾರಕ ಡ್ರಗ್ಸ್‌ನ ಮೂಲ ಪತ್ತೆಯಾಗಿದೆ. ಮಹೇಂದ್ರರೆಡ್ಡಿ ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದು, ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ಇಟ್ಟಿದ್ದು, ರಾಶಿ ರಾಶಿ ಔಷಧಗಳು ಪತ್ತೆಯಾಗಿದೆ.
ಮಾರತ್‌ಹಳ್ಳಿ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗೊಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದು, ಎಲ್ಲಿ ಎಂದು ಆರೋಪಿ ಬಾಯ್ದಿಟ್ಟಿದ್ದಾನೆ. Propofol ಎಂಬ ಅನಸ್ತೇಷಿಯಾವನ್ನ ಕೊಟ್ಟು ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಮೆಡಿಕಲ್‌ಗೆ ಹೋಗಿ propfol ಬೇಕು ಎಂದು ಆರೋಪಿ ಮಹೇಂದ್ರ ರೆಡ್ಡಿ ಕೇಳಿದ್ದಾನೆ. ಆಗ ಮೆಡಿಕಲ್‌ನವರು ಪ್ರೊಪೋಪೋಲ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗ ಆತ ತಾನೋರ್ವ ಸರ್ಜನ್ ಎಂದು ಹೇಳಿ ಪ್ರಿಸ್ಕ್ರಿಪ್ಷನ್ ನೀಡಿ ತುರ್ತು ಚಿಕಿತ್ಸೆಗೆ ಬೇಕು ಎಂದು ಹೇಳಿ ಖರೀದಿ ಮಾಡಿದ್ದಾನೆ.
ಮನೆಯಲ್ಲಿ ಮಲಗಿದ್ದ ಪತ್ನಿ ಕೃತಿಕಾಳಿಗೆ ರಾತ್ರಿ ವೇಳೆ ಐವಿ ಮೂಲಕ Propofol ನೀಡಿದ್ದ. ಇದು ಓವರ್‌ಡೋಸ್ ಆಗಿ ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ. ಇಂಜೆಕ್ಷನ್ ಪವರ್‌ನಿಂದ ಕೃತಿಕಾ ಮೊದಲು ನಿದ್ರೆಗೆ ಜಾರಿದ್ದು, ನಂತರ ಕೋಮಾಗೆ ಹೋಗಿದ್ದಳು. ಕೋಮಾದಿಂದ ಹೊರಗೆ ತರಲು ಮೆಡಿಸನ್ ನೀಡದ ಕಾರಣ ನಂತರ ಸಾವಿಗೀಡಾಗಿದ್ದಳು. ಈ ವೇಳೆ ಆರೋಪಿ ಮಹೇಂದ್ರ ರೆಡ್ಡಿ ಕೃತಿಕಾ ಜೊತೆನೇ ರಾತ್ರಿ ಮಲಗಿದ್ದ.
ಮಹೇಂದ್ರರೆಡ್ಡಿ ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದಿದ್ದ. ಗ್ಯಾಸ್ಟ್ರಿಕ್ ಔಷಧಿ, ಗ್ಲೂಕೋಸ್ ಬಾಟಲ್ ಸೇರಿ ರಾಶಿ ರಾಶಿ ಔಷಧಗಳು ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ಪತ್ತೆಯಾಗಿದೆ. ಕೃತಿಕಾ ರೂಮನ್ನು ಕ್ಲಿನಿಕ್ ರೀತಿ ಬದಲಾಯಿಸಿದ್ದ. ಋತುಚಕ್ರದ ಸಮಯದಲ್ಲೂ ಡ್ರಿಪ್ ಹಾಕಲು ಒತ್ತಾಯ ಮಡುತ್ತಿದ್ದ, ಕ್ಯಾನುವಲ್ ಚುಚ್ಚಿ ಕೈ ತುಂಬಾ ಸೂಜಿಯ ಗಾಯ ಮಾಡಿದ್ದ.
ಅನಸ್ತೇಶಿಯಾ ಮೆಡಿಸನ್ ರಹಸ್ಯವನ್ನು ಪೊಲೀಸರು ಪತ್ತೆ ಮಾಡಿದ್ದು, ಸಾಕ್ಷಿ ದೊರಕಿದೆ. ಇಲ್ಲಿಯವರೆಗೆ ತಾನು ಏನೂ ಮಾಡೇ ಇಲ್ಲ ಎಂದು ಕಥೆ ಕಟ್ಟುತ್ತಿದ್ದ ಈತ ಇದೀಗ ಡ್ರಗ್ಸ್ ಖರೀದಿ ಮಾಡುವುದು ಸಾಕ್ಷಿ ಸಹಿತ ಬಯಲುಗೊಂಡಿದೆ.
