Home » Dharmasthala Case: ಧರ್ಮಸ್ಥಳ ಕೇಸಲ್ಲಿ ನ್ಯಾಯಕ್ಕೆ ಲೇಖಕಿಯರ ಒತ್ತಾಯ: ಪತ್ರದಲ್ಲೇನಿದೆ?

Dharmasthala Case: ಧರ್ಮಸ್ಥಳ ಕೇಸಲ್ಲಿ ನ್ಯಾಯಕ್ಕೆ ಲೇಖಕಿಯರ ಒತ್ತಾಯ: ಪತ್ರದಲ್ಲೇನಿದೆ?

0 comments
CM Post

Dharmasthala Case: ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿವಿಧ ಸಂಘಟನೆಗಳು ಪ್ರತಿನಿಧಿಗಳು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರರ ನಿಯೋಗವು, “ರಾಜ್ಯದಲ್ಲಿ ಮಹಿಳೆಯರ ಮೇಲಿನ ಹಿಂಸೆ ತಡೆಯಲು ವಿ.ಎಸ್‌.ಉಗ್ರಪ್ಪ ಅವರ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸಬೇಕು ಹಾಗೂ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಭೀಕರ ಅತ್ಯಾ*ಚಾರ, ಬರ್ಬರ ಕೊ*ಲೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೋತ್ತಾಯ ಮಾಡಿದೆ.

ಮಹಿಳೆಯರ ಸುರಕ್ಷತೆಗೆ ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು, ಮಹಿಳಾ ಸಹಾಯ ಡೆಸ್ಕ್‌ ಸೇರಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು,ಎಲ್ಲಾ ಧರ್ಮಗಳ, ಧಾರ್ಮಿಕ ಸಂಸ್ಥೆಗಳಲ್ಲಿ ಆಂತರಿಕ ಸಮಿತಿ ರಚಿಸಿ ಲೈಂಗಿಕ ಕಿರುಕುಳಗಳ ಪ್ರಕರಣ ತೆಗೆದುಕೊಳ್ಳಲು ಪಾಶ್‌ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಆರೋಗ್ಯಕರ ಲೈಂಗಿಕತೆ ಕುರಿತು ಶಿಕ್ಷಣ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

You may also like